ಹಾವೇರಿ | ಯುವಕರಿಗೆ ಸ್ಥಳೀಯ ಆಡಳಿತ, ಸಂವಿಧಾನ ಜಾಗೃತಿ ತರಬೇತಿ

Date:

Advertisements

“ಸ್ಥಳೀಯ ಆಡಳಿತವು ಸರ್ಕಾರದ ಅತೀ ಕೆಳಮಟ್ಟದ  ಘಟಕವಾಗಿದ್ದು, ಜನ ಸಾಮಾನ್ಯರ ಜೀವನಕ್ಕೆ ನೇರವಾಗಿ ಸಂಬಂಧ ಹೊಂದಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ” ಎಂದು ಸ್ಥಳೀಯ ಆಡಳಿತ, ಸಂವಿಧಾನ ಅರಿವು ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಫಕ್ಕಿರೇಶ ಗೌಡಳ್ಳಿ ಮಾತನಾಡಿದರು.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಹಸನಾಬಾದಿ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಸಮಾಜ ಸೇವಾ ಸಂಸ್ಥೆ ವತಿಯಿಂದ ಯುವಜನರಿಗೆ ಸ್ಥಳೀಯ ಆಡಳಿತ ಮತ್ತು ಸಂವಿಧಾನ ಅರಿವು ಕುರಿತು ಜಾಗೃತಿ ತರಬೇತಿ ಕಾರ್ಯಕ್ರಮ ನಡೆಯಿತು.

“ಸ್ಥಳೀಯ ಆಡಳಿತವು ಜನಸಾಮನ್ಯರ ಹಿತಾಸಕ್ತಿಗಳನ್ನು ಇಟ್ಟುಕೊಂಡು ಕಾರ್ಯ ಮಾಡುತ್ತದೆ. ಕೆಲ ಚುನಾಯಿತ ಪ್ರತಿನಿಧಿಗಳು ಹಿತಾಸಕ್ತಿಗಳನ್ನು ಸಾದಿಳಗೊಳಿಸಲು ಪ್ರಯತ್ನಮಾಡುವ ಸಾಧ್ಯತೆಗಳಿರುತ್ತವೆ. ಯುವಕರು ಗಮನಹರಿಸಿ ಪ್ರಶ್ನೆ ಮಾಡಿದಾಗ ನಿಜವಾಗಿಯೂ ಜನರ ಹಿತಾಸಕ್ತಿ ಕಾಪಾಡಲು ಸಾಧ್ಯ” ಎಂದು ಹೇಳಿದರು.

 “ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ ರಚನೆ, ವಾರ್ಡ ಸಭೆ, ಗ್ರಾಮ ಸಭೆ ಮತ್ತು ನರೇಗಾದಿಂದ ವಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳ ಅಭಿವೃದ್ದಿ” ಕುರಿತು ತಿಳಿಸದರು. 

“ಸಂವಿಧಾನದ ನಮ್ಮ ಮೂಲ ಗ್ರಂಥವಾಗಿರಬೇಕು.  ಸಂವಿಧಾನವನ್ನು ಓದುವುದರ ಮೂಲಕ ಅದರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ಸಮಾಜದ ತಲ್ಲಣಗಳಿಗೆ ಕಿವಿಯಾಗಲು ಸಾಧ್ಯ” ಎಂದು ಯುವಕರಿಗೆ ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ರೈತರ ಬದುಕು ಸಂಕಷ್ಟ; ಬೆಳೆ ಪರಿಹಾರ ನೀಡುವಂತೆ ರೈತ ಸಂಘ ಮನವಿ

ಕಾರ್ಯಕ್ರಮದಲ್ಲಿ ಹಸನಾಬಾದಿ ಗ್ರಾಮದ ಯುವಕರು ಹಾಜರಿದ್ದರು. ಪಿರಪ್ಪ ಸಿರ್ಸಿ ನಿರೂಪಿಸಿದರು.  ಬಸವರಾಜ ಸ್ವಾಗತಿಸಿದರು. ಶಿವಲಿಂಗ ಬಸಾಪುರ ಧನ್ಯವಾದ ಸಲ್ಲಿಸಿದರು. ಲೊಯೋಲ ಸಂಸ್ಥೇಯ ಸಿಬ್ಬಂದಿ ಹೊನ್ನಮ್ಮ ಸೇರಿದಂತೆ ಇನ್ನೂ ಅನೇಕರು ಉಪಸ್ಥೀತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X