ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಅವ್ಯವಹಾರ ಆರೋಪದಡಿ ಯಾದಗಿರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿ ಐವರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ ದೂರು ನೀಡಿದ ಮೇರೆಗೆ ಎಇ ಆನಂದ, ಎಇಇ ಬನ್ನಪ್ಪ, ಶಹಾಪುರ ಉಪವಿಭಾಗದ ಹೆಚ್ಚುವರಿ ಪ್ರಭಾರ ಸಹಾಯಕ ಎಂಜಿನಿಯರ್–2 ಎನ್.ಶ್ರೀನಿವಾಸ, ಗುತ್ತಿಗೆದಾರ ವೆಂಕಟೇಶ ಗುರಸಣಗಿ ಮತ್ತು ಥರ್ಡ್ ಪಾರ್ಟಿ ಸಂಸ್ಥೆ ಬೆಂಗಳೂರಿನ ಟ್ರಾನ್ಸ್‌ಪೋರ್‌ಟೆಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರ ಜೆಜೆಎಂ ಕಾಮಗಾರಿ ಅಪೂರ್ಣಗೊಳಿಸಿದ್ದು ಅಲ್ಲದೆ ₹1.45 ಕೋಟಿ ಮೊತ್ತದ ಕಾಮಗಾರಿ ಮಾಡಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಹೆಚ್ಚುವರಿಯಾಗಿ ₹1.90 ಕೋಟಿ ಬಿಲ್ ಪಾವತಿಸಿ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ : ಕಲಬುರಗಿ | ಬಹುಜನ ಚಳವಳಿಯಿಂದ ಸಾಮಾಜಿಕ ಪರಿವರ್ತನೆ : ಹ.ರಾ.ಮಹೇಶ