ಏಷ್ಯಾಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇತಿಹಾಸ ಬರೆದಿದ್ದು, ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ 8 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದೆ.
ಬಿಹಾರದ ರಾಜಗೀರ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಅಕ್ರಮಣಕಾರಿ ಆಟಕ್ಕೆ ಮಂದಾದ ಆತಿಥೇಯ ತಂಡ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
2025ರ ಹಾಕಿ ಏಷ್ಯಾಕಪ್ ಫೈನಲ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ, ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿ 8 ವರ್ಷಗಳ ಬಳಿಕ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್ ಗೆ ಅರ್ಹತೆಯನ್ನೂ ಪಡೆದಿದೆ.
2003, 2007 ಹಾಗೂ 2017ರಲ್ಲಿ ಚಾಂಪಿಯನ್ ಆಗಿದ್ದ ಭಾರತ, ಈಗ 8 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೂ ನೀಗಿಸುವ ಮೂಲಕ 4ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಭಾರತ ತಂಡ ತನ್ನ ಹಾಕಿ ಸ್ವರ್ಣಯುಗವನ್ನು ಮತ್ತೆ ನೆನಪಿಸಿದೆ.
ಭಾರತ ತಂಡದ ಪರ ದಿಲ್ಪ್ರೀತ್ಸಿಗ್ (28, 45ನೇ ನಿಮಿಷ) ಅವರಲ್ಲದೆ, ಸುಖ್ಜೀತ್ ಸಿಂಗ್(1ನೇ ನಿ.) ಮತ್ತು ಅಮಿತ್ ರೋಹಿದಾಸ್(50ನೇ ನಿ.) ತಲಾ ಒಂದು ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರು. ಅತ್ತ ಕೊರಿಯಾ ಪರ ಡಯಾನ್ ಸನ್(51) ಏಕೈಕ ಗೋಲ್ ಗಳಿಸಿದರು.
