ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಎರಡು ಓಣಿಗಳ ಡಿಜೆ ವಿಚಾರದಲ್ಲಿ ಯುವಕರ ಮಧ್ಯೆ ಗುಂಪು ಜಗಳವಾಡಿದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಖಾನಾಪುರ ಓಣಿ ಮತ್ತು ಗ್ರಾಮದೇವಿ ಓಣಿಯ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ಎರಡೂ ಡಿಜೆ ಗುಂಪಿನವರು ಪರಸ್ಪರ ಸ್ಪರ್ಧೆಗೆ ಬೀಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಚಾಕು ಇರಿತ; ಆರೋಪಿಗಳು ಪರಾರಿ
ಇದೇ ವಿಚಾರದಲ್ಲಿ ಜಗಳಕ್ಕೆ ಮುಂದಾಗುತ್ತಾರೆ. ಕೂಡಲೇ ಪೊಲೀಸರು ಲಾಠಿ ಬೀಸುತ್ತಿದ್ದಂತೆ ಜನರು ಓಡಿದ್ದಾರೆ ಕೆಲವರಿಗೆ ಲಾಟಿ ಹೊಡೆತ ಬಿದ್ದಿವೆ. ನಂತರ ಎರಡೂ ಗಣೇಶ ವಿಸರ್ಜನೆ ಕಾರ್ಯಕ್ರಮ ಶಾಂತವಾಗಿ ನಡೆದವು ಎಂದು ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.