ಅಧಿಕೃತ ಸಭೆಯಲ್ಲಿ ದೆಹಲಿ ಸಿಎಂ ಪತಿ: ಸರ್ಕಾರ ನಡೆಸುತ್ತಿರುವುದು ಯಾರೆಂದು ಪ್ರಶ್ನಿಸಿದ ವಿಪಕ್ಷಗಳು

Date:

Advertisements

ಸರ್ಕಾರದ ಅಧಿಕೃತ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪತಿ, ಉದ್ಯಮಿ ಮಹೇಶ್ ಗುಪ್ತಾ ಕಾಣಿಸಿಕೊಂಡಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲು ಭಾನುವಾರ ನಡೆಸಿದ ಸಭೆಯ ವೇಳೆ ರೇಖಾ ಗುಪ್ತಾ ಅವರ ಪತಿಯೂ ಕಾಣಿಸಿಕೊಂಡಿದ್ದಾರೆ.

ಈ ಸಭೆಯಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ನಿರ್ಣಯಿಸಲು ಮತ್ತು ನಿಗದಿತ ಸಮಯದೊಳಗೆ ವಿವರವಾದ ಸ್ಥಿತಿ ವರದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆದರೆ ಚಿತ್ರದಲ್ಲಿ ಸಿಎಂ ಪಕ್ಕದಲ್ಲೇ ಪತಿ ಇರುವುದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿಪಕ್ಷಗಳು ನಿಜವಾದ ಮುಖ್ಯಮಂತ್ರಿ ಯಾರು ರೇಖಾ ಅವರೇ ಅಥವಾ ರೇಖಾ ಪತಿ ಮಹೇಶ್ ಅವರೇ ಎಂದು ಪ್ರಶ್ನಿಸಿದೆ.

ಇದನ್ನು ಓದಿದ್ದೀರಾ? ದೆಹಲಿ ಸಿಎಂ ರೇಖಾ ಗುಪ್ತಾ ಸೇರಿ ಐವರು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಮ್‌ ಆದ್ಮಿ ಪಕ್ಷ(ಎಎಪಿ) ಉಸ್ತುವಾರಿ ಸೌರಭ್ ಭಾರದ್ವಾಜ್, “ದೆಹಲಿ ಸರ್ಕಾರವು ಫುಲೇರಾ ಪಂಚಾಯತ್ ಆಗುತ್ತದೆ. ಫುಲೇರಾ ಪಂಚಾಯತ್‌ನಲ್ಲಿ ಮಹಿಳಾ ಸರಪಂಚ್ ಅವರ ಪತಿ ಸರಪಂಚ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅದರಂದತೆಯೇ ದೆಹಲಿಯಲ್ಲಿ, ಮುಖ್ಯಮಂತ್ರಿಯ ಪತಿ ಅಧಿಕೃತ ಸಭೆಗಳಲ್ಲಿ ಕುಳಿತಿದ್ದಾರೆ. ಇದು ಸಂಪೂರ್ಣವಾಗಿ ಸಂವಿಧಾನಬಾಹಿರವಾಗಿದೆ. ರಾಷ್ಟ್ರದ ರಾಜಧಾನಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಯನ್ನು ಈ ರೀತಿ ಅಪಹಾಸ್ಯ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷವನ್ನು ಪರಿವಾರ ರಾಜಕಾರಣಕ್ಕಾಗಿ ನಿಂದಿಸುತ್ತಿರುವ ಬಿಜೆಪಿ ಈಗ ವಿವರ ನೀಡಬೇಕು. ಇದು ಪರಿವಾರ ರಾಜಕಾರಣ ಅಲ್ಲದೆ ಮತ್ತೆ ಇನ್ನೇನು? ವಿಶ್ವದ ಅತಿದೊಡ್ಡ ಪಕ್ಷದ ಮುಖ್ಯಮಂತ್ರಿಗೆ ಅವರು ನಂಬಬಹುದಾದ ಯಾವುದೇ ಕಾರ್ಯಕರ್ತ ಉಳಿದಿಲ್ಲವೇ? ಕುಟುಂಬದ ಸದಸ್ಯರು ಮಾತ್ರ ಮಾಡಬಹುದಾದ ಕೆಲಸ ಯಾವುದು? ಮುಖ್ಯಮಂತ್ರಿ ತನ್ನ ಪತಿಯ ಅಧಿಕಾರವನ್ನು ಸ್ಥಾಪಿಸಲು ಬಯಸುವ ಕಾರಣಗಳೇನು” ಎಂದು ಪ್ರಶ್ನಿಸಿದ್ದಾರೆ.

“ಸಿಎಂ ಪತಿಯನ್ನು ಈ ರೀತಿ ಸರ್ಕಾರಿ ಆಡಳಿತ ವ್ಯವಸ್ಥೆಯ ಭಾಗವಾಗಿ ಏಕೆ ಮಾಡಲಾಗುತ್ತಿದೆ? ಈ ಫೋಟೋವನ್ನು ಸಿಎಂ ರೇಖಾ ಗುಪ್ತಾ ಅವರ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಕೊಳ್ಳಲಾಗಿದೆ. ಅದೇ ಫೋಟೋವನ್ನು ಸಿಎಂಒ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ದೆಹಲಿಯಲ್ಲಿ “ಇಬ್ಬರು ಮುಖ್ಯಮಂತ್ರಿಗಳನ್ನು” ನೇಮಿಸಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ರೇಖಾ ಗುಪ್ತಾ ಅವರನ್ನು ಟೀಕಿಸಿದ್ದಾರೆ. “ಫುಲೇರಾ ಪಂಚಾಯತ್‌ಗೆ ಸ್ವಾಗತ. ಪ್ರಧಾನಿ ಮೋದಿ ದೆಹಲಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ರೇಖಾ ಗುಪ್ತಾ ಮುಖ್ಯಮಂತ್ರಿ, ಅವರ ಪತಿ ಸೂಪರ್ ಮುಖ್ಯಮಂತ್ರಿ. ಬಿಜೆಪಿ 6 ತಿಂಗಳಲ್ಲಿ ದೆಹಲಿಯನ್ನು ಧ್ವಂಸ ಮಾಡಿದೆ” ಎಂದು ದೂರಿದ್ದಾರೆ.

ಇನ್ನು “ರೇಖಾ ಗುಪ್ತಾ ದೆಹಲಿ ಸರ್ಕಾರವನ್ನು ನಡೆಸುತ್ತಿದ್ದಾರೋ ಅಥವಾ ಅವರ ಪತಿಯೋ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಆದರೆ ಬಿಜೆಪಿ ಮಾತ್ರ ಸಿಎಂ ಪತಿ ಅಧಿಕೃತ ಸಭೆಯಲ್ಲಿ ಭಾಗಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

Download Eedina App Android / iOS

X