ಮಕ್ಕಳಲ್ಲಿ ಮೊಬೈಲ್‍ಗಿಂತ ಮುಖ್ಯವಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದೆ. ಮೊಬೈಲ್‍ನಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜು ಧುಮುಕನಾಳ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದಲ್ಲಿ ಕರ್ನಾಟಕ ಸಂಗ್ರಾಮ ಸೇನೆ, ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊಬೈಲ್‌ನಿಂದ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ನಮ್ಮ ಕೆಲಸ ಕಡಿಮೆ ಆಗಿದ್ದಾವೆ. ಚಿಂತನೆ ಹೆಚ್ಚಾಗಿವೆ. ನಮ್ಮ ಬದುಕಿನ ಜೊತೆಗೆ ಆಟ ಮತ್ತು ನಮ್ಮ ಸಂಸ್ಕೃತಿ ಉಳಿಸುವಲ್ಲಿ ಕಾರ್ಯ ಮಾಡಬೇಕು. ಜನಪದ ಸಂಸ್ಕೃತಿಯನ್ನು ಪುನಃ ಜಾರಿಗೆ ತರಬೇಕಿದೆ. ಮಕ್ಕಳಿಗೆ ಮೊಬೈಲ್‍ಗಿಂತ ಮುಖ್ಯವಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪಾಲಕರು ಬೆಳೆಸಬೇಕಿದೆ ಎಂದರು.
ಕುಂದಗೋಳ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ ಸರಾವರಿ ಮಾತನಾಡಿ, ಶಿಕ್ಷಕರೆಂದರೆ ಮೊದಲಿನಂತಿಲ್ಲ. ಮೊದಲು ಶಿಕ್ಷಕರೆಂದರೆ ಅಪಾರ ಗೌರವ ಕೊಡುತ್ತಿದ್ದರು. ಆದರೆ; ಇತ್ತೀಚಿನ ದಿನಗಳಲ್ಲಿ ಶಿಕ್ಷಕ ಎಂದರೆ ನಮ್ ಫ್ರೇಂಡ್ ಎನ್ನುತ್ತಾರೆ. ಇನ್ನು ಶಿಕ್ಷಕವೃತ್ತು ಅಂದುಕೊಂಡಷ್ಟು ಸುಲಭವಿಲ್ಲ. ಎಲ್ಲವನ್ನೂ ನಿಭಾಯಿಸಿಕೊಂಡು ಸಾಗುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಮೊದಲು ಗೌರವಿಸುವುದನ್ನು ಕಲಿಯಬೇಕು. ಗುರುವಿಗ ಬಹಳ ಮಹತ್ವವಿದೆ. ಅದು ಇತ್ತೀಚೆಗೆ ಕಡಿಮೆಯಾಗುತ್ತಿದೆ ಎನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಕಳ್ಳರನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು; ವಿಡಿಯೋ ವೈರಲ್!
ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯೆ ಭವಾನಿ ಮೊಗೆರ್, ಸೀಮಾ, ಸುನಿತಾ, ಸುಮಂಗಲ, ಮಂಜುನಾಥ್, ಪಕ್ಕಿರೇಶ್ ಶಿಕ್ಷಕರಿಗೆ ಕರ್ನಾಟಕ ಸಂಗ್ರಾಮ ಸೇನೆಯ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ ಮಂಜುನಾಥ್ ದೊಡ್ಡಮನಿ, ಮಹಿಳಾ ಜಿಲ್ಲಾಧ್ಯಕ್ಷೆ ರತ್ನ ಗಿಡ್ಡಿವೀರಣ್ಣರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ವಿವೇಕಿ, ತಾಲೂಕ ಅಧ್ಯಕ್ಷ ಹಸನ್ ಸಾಬ್, ಉಪಾಧ್ಯಕ್ಷ ಪರಮೇಶ್ ವಾಲಿಕಾರ್, ಗೌರವ ಅಧ್ಯಕ್ಷ ಗೋವಿಂದ್ ರಾವ್ ದೇಶ್ಪಾಂಡೆ, ಕಾರ್ಯದರ್ಶಿ ಮಲ್ಲಿಕಾರ್ಜುನ್ ವೀರಪ್ಪನವರ, ಸದಸ್ಯರಾದ ರಮೇಶ್ ಕುಂಬಾರ, ವಿರೂಪಾಕ್ಷ ಹೂಗಾರ, ರಾಘವೇಂದ್ರ ಇಚ್ಚಂಗಿ, ಫಕ್ರುಸಾಬ್ ನದಾಫ್, ಮಹೇಶ್ ಗೌಡರ ಹಾಗೂ ಗ್ರಾಮದ ಸಮಸ್ತ ಹಿರಿಯರು, ಯುವಕರು, ವಿದ್ಯಾರ್ಥಿಗಳು, ಮುಖಂಡರು ಇದ್ದರು.