ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಹುಬ್ಬಳ್ಳಿಯ ‘ಬ್ಲಿಂಗ್‌ಡೆ ಇನ್ನರ್ ವೀಲ್ ಕ್ಲಬ್’ ಮತ್ತು ‘ರೇಡಾನ್ ಕ್ಯಾನ್ಸರ್ ಫೌಂಡೇಶನ್’ ಸಹಯೋಗದೊಂದಿಗೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ವಿವಿಧ ಶಾಲೆಗಳ 9 ರಿಂದ 14 ವರ್ಷದೊಳಗಿನ 68 ಬಾಲಕಿಯರಿಗೆ ಉಚಿತವಾಗಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಲಸಿಕೆ ನೀಡಿದರು. ಈ ಲಸಿಕೆಯು ಆರಂಭಿಕ ಹಂತದಲ್ಲೇ ಸೋಂಕು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ತಿಳಿಸಿದರು. ಇದೇ ವೇಳೆ ಡಾ. ರತ್ನಮಾಲಾ ದೇಸಾಯಿಯವರು ಲಸಿಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಮಕ್ಕಳಲ್ಲಿ ಮೊಬೈಲ್‍ಗಿಂತ ಮುಖ್ಯವಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದೆ: ಸಂಜು ಧುಮುಕನಾಳ
ಈ ಸಂದರ್ಭದಲ್ಲಿ ರೇಡಾನ್ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷೆ ಶೀಲಾ ಭೂಸದ್, ಡಾ. ಶೀತಲ್ ಕುಲ್ಗೋಡ್, ಡಾ. ಕೇಲ್ಕೆ ಕುಲಕರ್ಣಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಎಫ್.ಎಸ್. ಬೆಂಗೇರಿ, ಜಿ.ಸಿ. ರಟ್ಟಿಗೇರಿಮಠ, ವಿರುಪಾಕ್ಷಗೌಡ ರಂಗನಗೌಡ್ರ, ಶಿವಪ್ಪಾ ಬಡ್ನಿ, ಸೋಮಣ್ಣ ಕಾಕಂಬಿ ಉಪಸ್ಥಿತರಿದ್ದರು.