ಶಿವಮೊಗ್ಗ, ಕುವೆಂಪು ವಿವಿ, ರಾಷ್ಟ್ರೀಯ ಸೇವಾ ಯೋಜನೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸೆ. 9 ಮತ್ತು 10 ರಂದು ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಎರಡು ದಿನಗಳ ವಿ.ವಿ.ಮಟ್ಟದ ನಾಯಕತ್ವ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಡಾ. ಪ್ರಕಾಶ್ ಮರ್ಗನಳ್ಳಿ ಹಾಗೂ ಸಂಯೋಜಕರಾದ ಶುಭಮರವಂತೆ ತಿಳಿಸಿದ್ದಾರೆ.
ಸೆಪ್ಟೆಂಬರ್ 9ರ ಬೆಳಿಗ್ಗೆ 10.30ಕ್ಕೆ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಕುವೆಂಪು ವಿವಿ ಕುಲಸಚಿವ ಮಂಜುನಾಥ್ ಎ.ಎಲ್. ಉದ್ಘಾಟಿಸುವರು. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಅವಿನಾಶ್ ಟಿ. ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯಕ್ರಮ ನಿರ್ದೇಶಕ ಪ್ರೊ. ಜಿ.ಬಿ. ಶಿವರಾಜು ಅವರು ಆಶಯ ಭಾಷಣ ಮಾಡುವರು. ಬೆಳಗ್ಗೆ 12ಕ್ಕೆ ಎನ್ಎಸ್ಎಸ್, ಗಾಂಧೀಜಿ ಮತ್ತು ಸೇವಾ ಮನೋಭಾವ ಕುರಿತು, ಮಧ್ಯಾಹ್ನ 2.30ಕ್ಕೆ ಎನ್ಎಸ್ಎಸ್ ಸ್ವರೂಪ ಮತ್ತು ಕಾರ್ಯ ಚಟುವಟಿಕೆ ಕುರಿತು, 4 ಗಂಟೆಗೆ ಬೀದಿ ನಾಟಕ ಮತ್ತು ಮೈಮ್ ಕುರಿತು ತರಬೇತಿ ನಡೆಯಲಿದೆ.
ಸಪ್ಟಂಬರ್ 10 ರಂದು ನಾಯಕತ್ವ ಕೌಶಲ್ಯಗಳು, ಎನ್ಎಸ್ಎಸ್ ಗೀತೆಗಳು , ಬರವಣಿಗೆ ಕಲೆ ಮತ್ತು ಸಂವಹನ ಕೌಶಲ್ಯಗಳ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ. ಸಮರೋಪ ಸಮಾರಂಭ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.