ಅಪ್ರಾಪ್ತ ಬಾಲಕ ಮತ್ತು ಆತನ ಸ್ನೇಹಿತರಿಬ್ಬರು ಸ್ಕೂಟರ್ ಚಲಾಯಿಸಿದ ಸಂಬಂಧ ನ್ಯಾಯಾಲಯವು ಸ್ಕೂಟರ್ ಮಾಲೀಕರಿಗೆ ರೂ.27,500 ದಂಡ ವಿಧಿಸಿದ ಘಟನೆ ಜರುಗಿದೆ.
ಬಜಪೆ ಪೊಲೀಸ್ ಠಾಣೆಯ ಪಿಎಸ್ಐ ನೇತೃತ್ವದಲ್ಲಿ ಆಗಸ್ಟ್ 25 ರಂದು ಬಜಪೆ ಪೇಟೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಮೂವರು ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದು, ಸ್ಕೂಟರನ್ನು ನಿಲ್ಲಿಸಿ ದಾಖಲಾತಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಸ್ಕೂಟರನ್ನು ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸಿಕೊಂಡು ಬಂದಿರುವ ಬಗ್ಗೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ವಿಟ್ಲ, ಉಪ್ಪಿನಂಗಡಿಗೆ ಅಗ್ನಿಶಾಮಕ ಠಾಣೆ ನಿರ್ಮಾಣ: 15 ದಿನದೊಳಗೆ ಜಾಗ ಮಂಜೂರಾತಿಗೆ ಅಶೋಕ್ ರೈ ಸೂಚನೆ
ತನಿಖೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರನ್ನು ಚಲಾಯಿಸಲು ಪೋಷಕರು ಅವಕಾಶ ನೀಡಿರುವುದರಿಂದ ಬಜಪೆ ಪೊಲೀಸರು ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಸೆ.3 ರಂದು ಸ್ಕೂಟರ್ ಮಾಲಕರಿಗೆ ರೂ.27,500 ದಂಡ ವಿಧಿಸಿ ಆದೇಶ ನೀಡಿದೆ.
