ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಹಾಸನ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ)ನ ಸಹಾಯಕ ಕಾರ್ಯದರ್ಶಿ ಹಾಗೂ ಅಥ್ಲೆಟಿಕ್ಸ್ ತರಬೇತಿದಾರ ಪ್ರಸನ್ನ ಕುಮಾರ್ ಎಸ್ ಎಲ್ ಅವರು ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.
ಜಗತ್ತಿನಲ್ಲಿ ಒಲಂಪಿಕ್ ನಂತರ ಅತಿ ದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲ್ಪಡುವ ಈ ಸ್ಪರ್ಧೆ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರವರೆಗೆ ನಡೆಯಲಿದೆ. ಪ್ಯಾರಾ ಕಮಿಟಿ ಆಫ್ ಇಂಡಿಯಾ ಆಯೋಜಿಸುತ್ತಿರುವ ಈ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ 110ಕ್ಕೂ ಹೆಚ್ಚು ದೇಶಗಳ 1700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಸನ್ನಕುಮಾರ್ ಹಾಸನದಿಂದ ಆಯ್ಕೆಯಾದ ಏಕೈಕ ತೀರ್ಪುಗಾರರಾಗಿದ್ದಾರೆ. ಅವರ ಸಾಧನೆಯಿಂದ ಹಾಸನ ಜಿಲ್ಲೆಗೆ ಹೆಮ್ಮೆ ತಂದಿದೆ.
ಇದನ್ನೂ ಓದಿ: ಹಾಸನ | ಸಹಕಾರ ಸಂಘಗಳ ಸ್ಥಾಪನೆಯಿಂದ ಆರ್ಥಿಕ ಬಲವರ್ಧನೆ ಸಾಧ್ಯ: ಶಾಸಕ ಸ್ವರೂಪ್ ಪ್ರಕಾಶ್
ಮುಂದಿನ ದಿನಗಳಲ್ಲಿ ಪ್ರಸನ್ನಕುಮಾರ್ ಅವರು ಒಲಂಪಿಕ್ಸ್‌ನಲ್ಲೂ ತೀರ್ಪುಗಾರರಾಗಿ ಆಯ್ಕೆಯಾಗಲೆಂದು ಹಾಸನ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್, ಜಿಲ್ಲಾ ಕ್ರೀಡಾಂಗಣದ ತರಬೇತಿದಾರರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶುಭ ಹಾರೈಸಿವೆ.