ಹಿಮಾಚಲ ಪ್ರದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರತೆ ಹೊಂದಿದ್ದಾರೆ. ತ್ರಿಪುರ, ಮಿಜೋರಾಂ, ಗೋವಾ ಹಾಗೂ ಲಡಾಖ್ ನಂತರ ಸಂಪೂರ್ಣ ಸಾಕ್ಷರತೆ ಸಾಧಿಸಿರುವ 5ನೇ ರಾಜ್ಯ ಹಿಮಾಚಲ ಪ್ರದೇಶವಾಗಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವರ್ಚುವಲ್ ಭಾಷಣ ಮಾಡಿದರು. “ರಾಜ್ಯವು ಸಂಪೂರ್ಣ ಸಾಕ್ಷರತೆ ಸಾಧಿಸಿದೆ. ಇದು ಸರ್ಕಾರ, ಸಮಾಜ ಮತ್ತು ಸ್ವಯಂಸೇವಕರ ಸಾಮೂಹಿಕ ಪ್ರಯತ್ನದ ಫಲವಾಗಿದೆ” ಎಂದು ಹೇಳಿದ್ದಾರೆ.
“ಸಾಕ್ಷರತೆ, ಸ್ವಾವಲಂಬಿ ಹಾಗೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನವೀಕೃತ ಕ್ರಮಗಳನ್ನು ಅನುಸರಿಸಬೇಕು. ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸಬೇಕು. ದೇಶಾದ್ಯಂತ ಓದುವುದು, ಬರೆಯುವುದು, ಸಂಖ್ಯಾಶಾಸ್ತ್ರದ ಕಲಿಕಾ ಕೌಶಲ್ಯಗಳನ್ನು ಸಕ್ರಿಯಗೊಳಿಸುವಲ್ಲಿ ಡಿಜಿಟಲ್ ತಂತ್ರಜ್ಞಾನದ ಪ್ರಮುಖ ಪಾತ್ರ ವಹಿಸುತ್ತದೆ” ಎಂದಿದ್ದಾರೆ.
“ಹಿಮಾಚಲ ಪ್ರದೇಶವು ಪರಿಪೂರ್ಣ ಕ್ರಿಯಾತ್ಮಕ ಸಾಕ್ಷರತೆಯನ್ನು ಸಾಧಿಸಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 5ನೇ ರಾಜ್ಯವಾಗಿದೆ. ತ್ರಿಪುರ, ಮಿಜೋರಾಂ ಮತ್ತು ಗೋವಾ ರಾಜ್ಯಗಳು ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ನಂತರ, ಹಿಮಾಚಲ ಪ್ರದೇಶವು ಸಂಪೂರ್ಣ ಸಾಕ್ಷರತಾ ರಾಜ್ಯವೆಂದು ಘೋಷಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಸಾಕ್ಷರತೆಯು ಓದು ಮತ್ತು ಬರವಣಿಗೆಯನ್ನು ಮೀರಿದೆ. ಘನತೆ, ಸಬಲೀಕರಣ ಮತ್ತು ಸ್ವಾವಲಂಬನೆಗೆ ಒಂದು ಸಾಧನವಾಗಿದೆ” ಎಂದು ಅವರು ಹೇಳಿದ್ದಾರೆ.
ಭಾರತದ ಸಾಕ್ಷರತಾ ಪ್ರಮಾಣವು 2011ರಲ್ಲಿ 74% ಇತ್ತು. 2023–24ರ ವೇಳೆಗೆ, 80.9%ಗೆ ಏರಿಕೆಯಾಗಿದೆ.