ಶಿವಮೊಗ್ಗ ನಗರದ ಜೆಪಿಎನ್ ಪ್ರೌಢ ಶಾಲೆಯಲ್ಲಿ ನೆನ್ನೆ ದಿವಸ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಸರೋಜಮ್ಮನವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಅವರು ಮಾತನಾಡಿ ರಾಷ್ಟ್ರೀಯ ಶಿಕ್ಷಣ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಭಾಗ್ಯವಾಗಿದೆ ಎಂದರು.
ಹಿಂದಿ ಶಿಕ್ಷಕಿ ಯಮುನಾ ಮಾತನಾಡಿ ನಾನು ಓದುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ಕಲಿಸಿ ಕೊಟ್ಟ ಶಿಕ್ಷಣದಿಂದ ನಾನು ಶಿಕ್ಷಕಿಯಾಗುವ ಭಾಗ್ಯ ದೊರೆಯಿತು ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂಸಮಾಜ ಸೇವಕ ಮಸ್ತಾನ್ ರವರು ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರ ಜೀವನದ ಇತಿಹಾಸ ತಿಳಿದಿಕೊಳ್ಳಿ ಇದರಿಂದ ನಿಮ್ಮ ಮುಂದಿನ ವಿದ್ಯಾಭ್ಯಾಸ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಶಿಕ್ಷಕರಿಗೆ ಹಾಗೂ ಪೋಷಕರಿಗೆ ಗೌರವ ನೀಡಿ ಹಾಗೂ ಒಳ್ಳೆಯ ಶಿಕ್ಷಣ ಹಾಗೂ ಜೀವನ ರೂಪಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅತಿಥಿಯಾದ ನಿವೃತ್ತಿ ಶಿಕ್ಷಕಿ ಸರೋಜಮ್ಮ ಮಾತನಾಡಿ ಅವರ ಬಾಲ್ಯದ ದಿನಗಳನ್ನು ನೆನಪಿಸಿ ಮಾತನಾಡಿದರು. ನಾನು ಓದಿದ ಸಂದರ್ಭದಲ್ಲಿ ನನಗೆ ಶಿಕ್ಷಕರು ಕೊಟ್ಟ ಮಾರ್ಗದರ್ಶನ ಉನ್ನತ ಶಿಕ್ಷಣವೇ ನನ್ನ ಜೀವನವನ್ನು ಬದಲಾವಣೆ ಮಾಡಿ ನಾನು ಇಂದು ಶಿಕ್ಷಕಿ ಆಗಿ ನಿವೃತ್ತಿ ಹೊಂದಿದ್ದೇನೆ. ಬಾಳ ಕಷ್ಟದ ಸಂದರ್ಭದಲ್ಲಿ ನನ್ನನ್ನು ನನ್ನ ಅಕ್ಕ ಕೈ ಹಿಡಿದರು . ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಿ ನಿಮ್ಮ ಜೀವನದಲ್ಲಿ ಬದಲಾವಣೆ ಅತಿ ಮುಖ್ಯ ಎಂದರು.
ಶಾಲೆಯ ಮುಖ್ಯ ಶಿಕ್ಷಕರಾದ ಇಮ್ತಿಯಾಜ್ ಅಹ್ಮದ್ ಮಾತನಾಡಿ ಶಿಕ್ಷಕರ ದಿನಾಚರಣೆಯಂದು ನಮಗೆ ಉಡುಗೊರೆ ಬೇಡ, ನಾವು ನಿರೀಕ್ಷಿಸುವುದು ವಿದ್ಯಾರ್ಥಿಗಳೆ ಶಿಕ್ಷಣವನ್ನು ಪಡೆದುಕೊಳ್ಳಿ, ಒಳ್ಳೆ ಫಲಿತಾಂಶವನ್ನು ಕೊಡಿ ಅದೇ ನೀವು ನಮಗೆ ನೀಡುವ ಉಡುಗೊರೆ ಎಂದರು. ಕೆಲವು ದಿನಗಳಿಂದ ಹಳೆ ವಿದ್ಯಾರ್ಥಿ ಸಂಘವತಿಯಿಂದ ಹಲವಾರು ಸಾಕಾರಗಳನ್ನು ನಮಗೆ ನೀಡುತ್ತಿದ್ದಾರೆ ಸದಾ ಹೀಗಿದ್ದರೆ ಅದೇ ಸಂತೋಷದ ವಿಷಯ ಎಂದರು. ನಿಮ್ಮ ಸಹಕಾರ ಅತೀ ಮುಖ್ಯವೆಂದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.