ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಈ ದಿನ ಸರ್ಕಾರಿ ಶಾಲೆಯಲ್ಲಿ ಸಾಕ್ಷರತಾ ದಿನಾಚರಣೆ ಆಚರಣೆ ಕುರಿತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಕೂಡ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭದ್ರಾಪುರ ಶಾಲೆ ಆವರಣದಲ್ಲಿ ನಡೆದ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಕ್ಷರಸ್ಥರು ಸರಳ ಓದು ಬರಹ ಲೆಕ್ಕಾಚಾರದ ಕೌಶಲಗಳನ್ನುಗಳಿಸುವ ಮೂಲಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಹೇಳಿದರು.

ಕಲಿತವರು ಕಲಿಯದವರಿಗೆ ಕಲಿಸುವ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕು. ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಪ್ರಯತ್ನಿಸಬೇಕು, ಸಂಪೂರ್ಣ ಸಾಕ್ಷರತೆ ಸಾಧಿಸಲು ಶ್ರಮಿಸಬೇಕೆಂದರು.
ಸಿ.ಆರ್.ಪಿ ದೊರಿಗ್ಯಾನಾಯ್ಕ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಅದ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಪಾಲಾಕ್ಷಪ್ಪ ಜಗಧೀಶಪ್ಪ ,ಗ್ಯಾರಂಟಿ ಸಮಿತಿ ಸದಸ್ಯ ವಾಗೀಶ್, ಮುಖ್ಯ ಶಿಕ್ಷಕ ಕೆ.ಪ್ರಕಾಶ್, ಪಂಚಾಯತಿ ಅದ್ಯಕ್ಷೆ ರತ್ನಮ್ಮ ಉಪಾಧ್ಯಕ್ಷೆ ಅನ್ನಪೂರ್ಣ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಬಿಲ್ ಕಲೆಕ್ಟರ್ ಪ್ರಭಾಕರ್, ಶಿಕ್ಷಕ ವಿಜಯ ಕುಮಾರ್, ಅಬ್ಬನಗಟ್ಟೆ ರಂಗಪ್ಪ,ಕೂಡ್ಲಿ ಉಮೇಶಪ್ಪ ಶಿಕ್ಷಕಿಯರಾದ ವನಿತಾ, ದೀಪಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಾಕ್ಷರತಾ ಕಾರ್ಯಕ್ರಮದ ತಾಲ್ಲೂಕು ನೋಡೆಲ್ ಅಧಿಕಾರಿ ಧನಂಜಯ ಸ್ವಾಗತಿಸಿದರು. ಶಿಕ್ಷಕಿ ವಿನುತಾ ಪ್ರಾರ್ಥಿಸಿದರು. ಕೃಷ್ಣಮೂರ್ತಿ ನಿರೂಪಿಸಿ ಪಿ.ಕೆ. ರಮೇಶ್ ವಂದಿಸಿದರು.