ಕರ್ತವ್ಯ ದುರ್ನಡತೆ, ನಕಲಿ ಬಿಲ್ಲು ಸೃಷ್ಟಿ ಹಾಗೂ ಸರ್ಕಾರಿ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಜಿಲ್ಲೆಯ ಇಬ್ಬರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತುಗೊಳಿಸಲಾಗಿದೆ.
ಚಿಟಗುಪ್ಪಾ ತಾಲ್ಲೂಕಿನ ತಾಳಮಡಗಿ ಗ್ರಾಪಂ ಪಿಡಿಓ ಅಶ್ವಿನಿ ಹಾಗೂ ಮಂಗಲಗಿ ಗ್ರಾಪಂ ಪಿಡಿಓ ಬಸಪ್ಪಾ ಅಮೃತ ಇಬ್ಬರನ್ನೂ ಅಮಾನತುಗೊಳಿಸಿ ಬೀದರ್ ಜಿಲ್ಲಾ ಪಂಚಾಯತಿ ಸಿಇಒ ಡಾ.ಗಿರೀಶ ಬದೋಲೆ ಆದೇಶಿಸಿದ್ದಾರೆ.
ನಿರ್ಣಾ ಗ್ರಾಪಂ ಪಿಡಿಓ ಅಶ್ವಿನಿ ಅವರು ಸದ್ಯ ನಿಯೋಜನೆ ಮೇಲೆ ಇರುವ ತಾಳಮಡಗಿ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ 42,11,272 ಹಣ ಹಾಗೂ ನಿಧಿ-1 ಖಾತೆಯಲ್ಲಿ 2 ಲಕ್ಷ ಹಣ ಆರ್ಥಿಕ ದುರ್ನಡತೆ ಎಸಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಹಿನ್ನೆಲೆ ಪಿಡಿಒ ಅಶ್ವಿನಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಇನ್ನೂ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಪಂ ಪಿಡಿಓ ಬಸಪ್ಪಾ ಅಮೃತ ಅವರು 15ನೇ ಹಣಕಾಸು ಯೋಜನೆಯಡಿ ಕಡತ ನಿರ್ವಹಿಸದೆ ನಕಲಿ ಬಿಲ್ಲು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಬಸಪ್ಪಾ ಅಮೃತ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ಶಾಸಕ ಪ್ರಭು ಚವ್ಹಾಣ ವಾಟ್ಸ್‌ಆ್ಯಪ್‌ಗೆ ಅಶ್ಲೀಲ ಫೋಟೊ, ವಿಡಿಯೊ ಕಳುಹಿಸಿ ಹಣದ ಬೇಡಿಕೆ : ದೂರು ದಾಖಲು