ಮಲೆನಾಡಿನ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಜಾಸ್ತಿಯಾಗಿದ್ದು, ಈ ಕುರಿತು ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡ ಮನವಿ ಮಾಡಿದ್ದಾರೆ.
ನರಸಿಂಹರಾಜಪುರ ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ ಗುಡ್ಡೆಹಳ್ಳ ವ್ಯಾಪ್ತಿಯಲ್ಲಿ ಒಂದು ಒಂಟಿ ಸಲಗ ಹಾಗೂ ಕೊಪ್ಪ ತಾಲ್ಲೂಕು ಹಿರೇಗದ್ದೆ ವ್ಯಾಪ್ತಿಯ ತುಪ್ಪೂರು, ಸಿಗಸೆ, ಸರಗಳಲೆ, ತುದಿಹಡ್ಲು, ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗರಮಕ್ಕಿ, ಕುಂಜಳ್ಳಿ, ಬಂಡೀಹೊಳೆ, ಶ್ರೀಪತಿಖಾನ್ ಎಸ್ಟೆಟ್, ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗೋಣಿ, ಸಿ.ಕೆ, ಬಾಳೇಹೊನ್ನೂರು, ಸುತ್ತಮುತ್ತಲು ಹಾಗೂ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬೂರು, ಮೇಲ್ಪಲ್, ಕರ್ಕೇಶ್ವರ, ಎಲೇಮಡ್ಲು, ಸಿ.ಆರ್.ಎಸ್, ತಲುವಾನೆ, ಶಾಂತಿಪುರ, ಮಕ್ಕಿಕೊಪ್ಪ, ಅಗಳಗಂಡಿ ಮತ್ತು ಕೊಗ್ರೆ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಸಹಜ ಸಾವು
ಶೃಂಗೇರಿ ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯಿತಿ ನೀಲಂದೂರು, ಹೆಗ್ಗರಸು, ಹುಲುಗಾರು, ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಿವಳ್ಳಿ ಹಾಗೂ ಮತ್ತಿತ್ತರ ಗ್ರಾಮಗಳಲ್ಲಿ ಒಟ್ಟು ಕಾಡಾನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಈ ಕುರಿತು ಅರಣ್ಯ ಸಚಿವರಾದ ಈಶ್ವರ್ ಕಂಡ್ರೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಟಿ. ಡಿ ರಾಜೇಗೌಡ ತಿಳಿಸಿದರು.