ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಖಾಲಿ ಉಳಿದಿರುವ ಸ್ಥಾನಗಳ ದಾಖಲಾತಿಗೆ ನಾಳೆ ಸೆ.12ರಂದು ಬೆಳಿಗ್ಗೆ 11ಕ್ಕೆ ಅಂತಿಮ ಕೌನ್ಸೆಲಿಂಗ್ ನಡೆಯಲಿದೆ.
ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಿಗದಿಪಡಿಸಲಾಗಿದ್ದು, ಅರ್ಹ ಮಕ್ಕಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಬೀದರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2025-26ನೇ ಶೈಕ್ಷಣಿಕ ಸಾಲಿಗಾಗಿ ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೈಸ್ ಅಡಿಯ ವಸತಿ ಶಾಲೆಗಳಿಗೆ ಕೆಇಎ ಮುಖಾಂತರ 6ನೇ ತರಗತಿಗೆ ಮೆರಿಟ್ ಆಧಾರದ ಮೇಲೆ ವಿವಿಧ ಮೀಸಲಾತಿ ವರ್ಗಗಳಲ್ಲಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಿದ ನಂತರ ವಿಶೇಷ ವರ್ಗದ ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಲಾಗಿದೆ. ಅದರ ನಂತರ ಸರ್ಕಾರ ಹೊಸ ಶಾಲೆಗಳನ್ನು ಮಂಜೂರಾತಿ ನೀಡಿದ್ದರಿಂದ ವರ್ಗವಾರು, ಲಿಂಗವಾರು ಸ್ಥಾನ ಉಳಿದಿರುವುದರಿಂದ ಬಸವಕಲ್ಯಾಣ ಹಾಗೂ ಬೀದರ್ ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ಅಂತಿಮ ಕೌನ್ಸೆಲಿಂಗ್ ಕರೆಯಲಾಗಿದೆ.
ಪ್ರಸಕ್ತ ವರ್ಷ 6ನೇ ತರಗತಿಯಲ್ಲಿ ವಸತಿ ಶಾಲೆಗಳಲ್ಲಿ ವರ್ಗವಾರು, ಲಿಂಗವಾರು ಖಾಲಿ ಉಳಿದ ಪ್ರವರ್ಗ-1 ಹೆಣ್ಣು-1, ಪರಿಶಿಷ್ಟ ಜಾತಿ ಹೆಣ್ಣು-22 ಗಂಡು-18, ಪರಿಶಿಷ್ಟ ಪಂಗಡ ಹೆಣ್ಣು-6, ಪ್ರವರ್ಗ 2(ಎ) ಹೆಣ್ಣು-5 ಗಂಡು-4, ಪ್ರವರ್ಗ 2ಬಿ ಗಂಡು-3, ಪ್ರವರ್ಗ 3(ಎ) ಹೆಣ್ಣು 3 ಗಂಡು 3 , ಪ್ರವರ್ಗ 3(ಬಿ) ಹೆಣ್ಣು-2 ಒಟ್ಟು 67 ಸೀಟುಗಳ ಭರ್ತಿಗೆ ಅಂತಿಮ ಹಂತದ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ಆದೇಶಿಸಿರುವುದರಿಂದ ಈ ಕೆಳಕಂಡ ಕಟ್ ಆಫ್ ಹೊಂದಿರುವ ಮಕ್ಕಳು ಹಾಜರಾಗಲು ಕೋರಿದ್ದಾರೆ.
ಇದನ್ನೂ ಓದಿ : ಬೀದರ್ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆರೋಪ : ಇಬ್ಬರು ಪಿಡಿಒ ಅಮಾನತು
ಮೆರಿಟ್ ಆಧಾರದ ಮೇಲೆ ಅರ್ಹರಿರುವ ವಿದ್ಯಾರ್ಥಿಗಳನ್ನು ವರ್ಗಾವಾರು, ಲಿಂಗಾವಾರು, ಮೀಸಲಾತಿ ರೋಸ್ಟರ್ ಪ್ರಕಾರ ಕೌನ್ಸೆಲಿಂಗ್ ನಡೆಸಲು ಅಂಕಗಳ ಕಟ್ ಆಫ್ ನಿಗದಿ ಮಾಡಿದ್ದು, ಶೇಕಡಾ ಅಂಕ ಪ್ರವರ್ಗ-1 ಹೆಣ್ಣು-34 ಪರಿಶಿಷ್ಟ ಜಾತಿ ಹೆಣ್ಣು-21 ಅಂಕ, ಗಂಡು 40 ಅಂಕ, ಪರಿಶಿಷ್ಟ ಪಂಗಡ ಹೆಣ್ಣು-41 ಅಂಕ , ಪ್ರವರ್ಗ 2 (ಎ) ಹೆಣ್ಣು-23 ಅಂಕ ಗಂಡು 45 ಅಂಕ, ಪ್ರವರ್ಗ 2(ಬಿ) ಗಂಡು-27 ಅಂಕ, ಪ್ರವರ್ಗ 3(ಎ) ಹೆಣ್ಣು 34 ಅಂಕ, ಗಂಡು 32 ಅಂಕ, ಪ್ರವರ್ಗ 3(ಬಿ)ಹೆಣ್ಣು 64 ಮೆರಿಟ್ ಕಟ್-ಆಪ್ ಅಂಕ ಇದ್ದ ಅರ್ಹ ಮಕ್ಕಳು ಹಾಜರಾಗಲು ಹಾಗೂ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕೂಡ ಕೌನ್ಸೆಲಿಂಗ್ ಹಾಜರಾಗಲು ಅವಕಾಶ ನೀಡಲಾಗಿದ್ದು ಸೀಟು ಲಭ್ಯತೆ ಆಧಾರದ ಮೇಲೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.