ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಂದ ಸಾಲು-ಸಾಲು ಯಡವಟ್ಟುಗಳು ಆಗುತ್ತಿದ್ದು, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದನದಲ್ಲೇ ಆರ್ಎಸ್ಎಸ್ ಗೀತೆ ಹಾಡಿದ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರು ಆರ್ಎಸ್ಎಸ್ ಮತ್ತು ಬಿಜೆಪಿ ಬೆಂಬಲಿತ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ತಿಮಟೂರಲ್ಲಿ ಎಬಿವಿಪಿ ಆಯೋಜನೆ ಮಾಡಿದ ರಾಣಿ ಅಬ್ಬಕ್ಕನ 500ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ ರಥಯಾತ್ರೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಪರಮೇಶ್ವರ್ ಪಾಲ್ಗೊಂಡಿದ್ದಾರೆ.
ಸಚಿವ ಪರಮೇಶ್ವರ್ ನಡೆ ಬಗ್ಗೆ ಟೀಕೆಗಳು ಕೇಳಿಬರುತ್ತಿದ್ದು, ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಷ್ಪಾರ್ಚನೆ ಮಾಡಿರುವ ವಿಡಿಯೋ ಈಗ ಎಲ್ಲಡೇ ವೈರಲ್ ಆಗುತ್ತಿದೆ. ಸಚಿವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.