ಶಿವಮೊಗ್ಗ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಸದಸ್ಯರನ್ನಾಗಿ ಮೂವರನ್ನು ರಾಜ್ಯ ಸರ್ಕಾರ ನೇಮಿಸಿದ್ದು ಶಿವಮೊಗ್ಗದ ಮಾಲತೇಶ್ ಅವರಲ್ಲಿ ಒಬ್ಬರಾಗಿದ್ದಾರೆ.
ಚಿಂತಾಮಣಿಯ ಸಿಎನ್ ನಾಗೇಶ್, ಗದಗಿನ ಗುರುರಾಜ ವಾದಿರಾಜ ಬಳಗಾನೂರು ಹಾಗೂ ಶಿವಮೊಗ್ಗದ ಪಿಎಂ ಮಾಲತೇಶ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಮಂಡಳಿಯ ನಾಮನಿರ್ದೇಶಕರನ್ನಾಗಿ ಆದೇಶಿಸಿದೆ.

ಇವರ ನೇಮಕಕ್ಕೆ ಸಂತೋಷ ವ್ಯಕ್ತಪಡಿಸಿದ ಮಾಜಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಸೊರಕೆ ಅವರು ಶಾಲು ಹೊದಿಸಿ,ಸನ್ಮಾನಿಸಿ ಅಭಿನಂದಿಸಿದರು.
ಮಂಡಳಿಯ ಆರ್ಟಿಕಲ್ ಆಫ್ ಅಸೋಸಿಯೇಷನ್ ಕಲಂ 33 ಅನ್ವಯ ಇವರ ನೇಮಕವಾಗಿದೆ.
ಈ ಕುರಿತು ಮಾತನಾಡಿದ ಪಿ.ಎಂ.ಮಾಲತೇಶ, ಈ ಕುರಿತು ನನಗೆ ಗೊತ್ತಿರಲಿಲ್ಲ. ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಉಸ್ತುವಾರಿ ಸಚಿವರ ಆಶೀರ್ವಾದದೊಂದಿಗೆ ಈ ಹುದ್ದೆ ದೊರಕಿದೆ ಎಂದರು.
ಬಡ ಬ್ರಾಹ್ಮಣರ ಮಕ್ಕಳ ಅಭಿವೃದ್ಧಿಗಾಗಿ ದುಡಿಯುವುದಾಗಿ ತಿಳಿಸಿದ್ದಾರೆ.