ಸಮೀಕ್ಷೆ: ಧರ್ಮದ ಕಾಲಂನಲ್ಲಿ ‘ವೀರಶೈವ’ ಬರೆಸದಂತೆ ಲಿಂಗಾಯತ ಮಠಾಧೀಶರ ಒಕ್ಕೂಟ ಕರೆ

Date:

Advertisements
ಲಿಂಗಾಯತರು ಹಿಂದೂಗಳಲ್ಲ, ಆದ್ದರಿಂದ ಅವರು ಜನಗಣತಿ ನಮೂನೆಗಳ ಧರ್ಮದ ಕಾಲಂನಲ್ಲಿ 'ಹಿಂದೂ' ಎಂದು ಬರೆಸಕೂಡದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದವರು ಕೇಳಿಕೊಂಡಿದ್ದಾರೆ. ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ

ರಾಜ್ಯಾದ್ಯಂತ ಸೆ.22ರಿಂದ ಆರಂಭವಾಗುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬದಲು ಬದಲು ವೀರಶೈವ-ಲಿಂಗಾಯತ ಎಂದು ಬರೆಸುವಂತೆ ಕರೆ ನೀಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರಕ್ಕೆ ಲಿಂಗಾಯತ ಮಠಾಧೀಶರ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಲಿಂಗಾಯತರು ಧರ್ಮದ ಕಾಲಂನಲ್ಲಿ ‘ಹಿಂದೂ’ ಬದಲಿಗೆ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕೆಂಬ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಲಹೆಯನ್ನು ನಾವು ತಿರಸ್ಕರಿಸುತ್ತೇವೆ. ಇದಕ್ಕೆ ವಿರುದ್ಧವಾಗಿ ಪ್ರತಿಯೊಬ್ಬ ಲಿಂಗಾಯತರು ತಮ್ಮ ಧರ್ಮವನ್ನು ಲಿಂಗಾಯತ ಎಂದು ಬರೆಸಬೇಕು ಎಂದು ಕೆಲವು ಕಾರಣಗಳನ್ನು ಉಲ್ಲೇಖಿಸಿ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಸೇರಿದಂತೆ 50 ಬಸವ ಲಿಂಗಾಯತ ಪರ ಸಂಘಟನೆಗಳು ಕರೆ ನೀಡಿವೆ.

ಅಖಿಲ ಭಾರತ ವೀರಶೈವ ಮಹಾಸಭಾದವರು ಲಿಂಗಾಯತರು ಹಿಂದೂಗಳಲ್ಲ ಮತ್ತು ಆದ್ದರಿಂದ ಅವರು ಎಲ್ಲ ಲಿಂಗಾಯತರು ಜನಗಣತಿ ನಮೂನೆಗಳ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. 121 ವರ್ಷಗಳ ಹಿಂದೆ 1904ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಿದ್ದಕ್ಕಾಗಿ ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಲಿಂಗಾಯತ ಒಕ್ಕೂಟಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.

ಆರ್‌ಟಿಐ ಅಡಿ ನಾವು 2020ರಲ್ಲೇ ಮಾಹಿತಿ ಪಡೆದಿದ್ದು, ಜಾತಿ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಜಾತಿಯನ್ನು ಪ್ರವರ್ಗ -3ಬಿ ಅಡಿಯಲ್ಲಿ ಸೇರಿಸಿ ಆದೇಶಿಸಲಾಗಿದೆ. ಇದನ್ನು ಹೊರತುಪಡಿಸಿ, ವೀರಶೈವ ಲಿಂಗಾಯತ ಪದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಅಥವಾ ಸುತ್ತೋಲೆ ಆಯೋಗದಲ್ಲಿ ಲಭ್ಯವಿರುವುದಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ನಾವು ಹಳೆಯ ದಾಖಲೆಗಳೊಂದಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಇದು ವಿಚಾರಣೆ ಹಂತದಲ್ಲಿದೆ. ಈ ಸಂದರ್ಭಗಳಲ್ಲಿ ಎಲ್ಲ ಲಿಂಗಾಯತರು ತಮ್ಮ ಧರ್ಮವನ್ನು ಯಾವುದೇ ಹಿಂಜರಿಕೆ ಅಥವಾ ಭಯವಿಲ್ಲದೆ ‘ಲಿಂಗಾಯತ’ ಎಂದು ಬರೆಸಬೇಕು ಎಂದು ಲಿಂಗಾಯತ ಸಮಾಜಕ್ಕೆ ಕರೆ ನೀಡಿದೆ.

2002ರಲ್ಲಿ ಕರ್ನಾಟಕ ಸರ್ಕಾರವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಆಗಿನ ಅಧ್ಯಕ್ಷರ ಒತ್ತಡಕ್ಕೆ ಮಣಿದು ಜಾತಿ ಪ್ರಮಾಣಪತ್ರ ಪ್ರಕ್ರಿಯೆಯನ್ನು ಗಣಕೀಕರಣಗೊಳಿಸುವಾಗ ಸರ್ಕಾರಿ ಆದೇಶದಲ್ಲಿ ‘ವೀರಶೈವ ಲಿಂಗಾಯತ’ವನ್ನು ತಪ್ಪಾಗಿ ಸೇರಿಸಿದೆ. ‘ವೀರಶೈವ ಲಿಂಗಾಯತ’ ಎಂದು ಕರೆಯಲು ಯಾವುದೇ ದಾಖಲೆಗಳಿಲ್ಲ. ಇದು ಕೇವಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೃಷ್ಟಿ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟಗಳು ಇದೇ ವೇಳೆ ಸ್ಪಷ್ಟಪಡಿಸಿವೆ.

ವೀರಶೈವ ಲಿಂಗಾಯತ ಕುರಿತ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ ಈಗಾಗಲೇ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹಲವು ವರ್ಷಗಳ ನಂತರವೂ ರಾಜ್ಯ ಸರ್ಕಾರ ಈ ತಪ್ಪನ್ನು ತಿದ್ದಿಕೊಂಡಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಈಶ್ವರ ಖಂಡ್ರೆ, ಶಂಕರ್ ಬಿದರಿ ಹಾಗೂ ರೇಣುಕಾ ಪ್ರಸನ್ನ ಸೇರಿದಂತೆ ಎಲ್ಲ ಪದಾಧಿಕಾರಿಗಳು ಬಹಳ ಹಿಂದೆಯೇ ನೀಡಲಾದ ತಮ್ಮದೇ ಆದ ಜನನ ಪ್ರಮಾಣಪತ್ರಗಳನ್ನು ನೋಡಲಿ. 2002ಕ್ಕಿಂತ ಹಿಂದಿನ ಎಲ್ಲ ಜನನ ಮತ್ತು ಜಾತಿ ಪ್ರಮಾಣಪತ್ರಗಳು ‘ಲಿಂಗಾಯತ’ ಅಥವಾ ‘ವೀರಶೈವ’ ​​ಅಥವಾ ಅವರ ‘ನಿಜವಾದ ಜಾತಿ’ ಹೆಸರನ್ನು ದಾಖಲಿಸಿವೆ. ಅವರಲ್ಲಿ ಯಾರಿಗೂ ‘ವೀರಶೈವ ಲಿಂಗಾಯತ’ ಇರಲಿಲ್ಲ. ಬದಲಾಗುತ್ತಿರುವ ರಾಜಕೀಯ ಸಮೀಕರಣಗಳಿಗೆ ಸರಿಹೊಂದುವಂತೆ ಧರ್ಮದ ಗುರುತನ್ನು ಬದಲಾಯಿಸುವುದು ಸರಿಯಲ್ಲ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟಗಳು ಎಚ್ಚರಿಸಿವೆ.

ಲಿಂಗಾಯತರು ಜಾತಿ ಅಂಕಣದಲ್ಲಿ ತಮ್ಮ ಜಾತಿಯನ್ನು ‘ಲಿಂಗಾಯತ’ ಅಥವಾ ‘ವೀರಶೈವ’ ​​ಎಂದು ಬರೆಸಬೇಕು ಎಂದು ಹೇಳಿದರೆ ನಾವು ಆ ಸಲಹೆಯನ್ನು ವಿರೋಧಿಸುವುದಿಲ್ಲ. ಲಿಂಗಾಯತರು ತಮ್ಮ ನಿಜವಾದ ಜಾತಿಯ ಹೆಸರನ್ನು ಜಾತಿ ಅಂಕಣದಲ್ಲಿ ಬರೆಯಬೇಕು. ಲಿಂಗಾಯತರಲ್ಲಿ 101 ಜಾತಿಗಳಿವೆ ಎಂಬುದು ಸತ್ಯ ಮತ್ತು ವೀರಶೈವ ಕೂಡ ಲಿಂಗಾಯತರಲ್ಲಿ ಒಂದು ಜಾತಿ, ಇದಕ್ಕೆ ವಿರುದ್ಧವಾಗಿ ಅಲ್ಲ ಲಿಂಗಾಯತ ಮಠಾಧೀಶರ ಒಕ್ಕೂಟಗಳು ಹೇಳಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ

ಲಿಂಗಾಯತ ಎಂದು ಏಕೆ ಬರೆಸಬೇಕು?

ಪ್ರತಿಯೊಬ್ಬ ಲಿಂಗಾಯತರು ತಮ್ಮ ಧರ್ಮವನ್ನು ಲಿಂಗಾಯತ ಎಂದು ಬರೆಸಬೇಕು ಎಂದು ಕೆಲವು ಕಾರಣಗಳನ್ನು ಲಿಂಗಾಯತ ಮಠಾಧೀಶರ ಒಕ್ಕೂಟ ಕೊಟ್ಟಿದೆ. ಆ ಕಾರಣಗಳು ಇಲ್ಲಿವೆ…

  • ಇಂದಿನ ಪಂಚಪೀಠಗಳ ಮೇಲಿನ ರೀತಿ-ನೀತಿಗಳೆಲ್ಲ ಬಸವಣ್ಣನವರು ಸ್ಥಾಪಿಸಿದ ಶರಣಧರ್ಮದ (ಲಿಂಗಾಯತ) ಬೋಧನೆ ಮತ್ತು ಅವರ ಮೂಲಭೂತ ತತ್ವ ಸಿದ್ಧಾಂತಗಳಿಗೆ ಭಿನ್ನವಾಗಿವೆ ಎಂಬುದನ್ನು ನಿಷ್ಠಾವಂತ ಓದುಗರು ಸುಲಭವಾಗಿ ಊಹಿಸಬಲ್ಲರು. ಶರಣಧರ್ಮವನ್ನು ಹಿಂದೂಕರಣ ಮತ್ತು ಸಂಸ್ಕೃತೀಕರಣಗೊಳಿಸುವ ಪ್ರಕ್ರಿಯೆಯ ಸಂಚಿನಲ್ಲಿ ಪಂಚಾಚಾರ್ಯರ ಪಾತ್ರ ಸ್ಪಷ್ಟವಾಗಿದೆ ಎನ್ನುವುದನ್ನು ಯಾರಾದರೂ ಗಮನಿಸಬಹುದು. ಶರಣರು ಯಾವ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆಯೋ ಅವುಗಳಿಗೆ ವಿರುದ್ಧವಾದ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಆ ಮೂಲಕ ಬಸವಣ್ಣನವರ ಶರಣ ಧರ್ಮ ಮತ್ತು ಸಂಸ್ಕೃತಿಗಳನ್ನು ನಿಶ್ಚಿತವಾಗಿ ವಿಕೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
  • ಬ್ರಾಹ್ಮಣರಾಗಿ ಜನಿಸಿ ಬ್ರಾಹ್ಮಣ ಪದ್ಧತಿಯ ಜನಿವಾರವನ್ನೇ ಕಿತ್ತೆಸೆದ ಬಸವಣ್ಣನವರು ನಿರಾಕರಿಸಿದ ಎಲ್ಲ ಬ್ರಾಹ್ಮಣೀಯ ನಂಬಿಕೆಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಪಂಚಾಚಾರ್ಯರು ಒಂದಲ್ಲ ಒಂದು ರೂಪದಲ್ಲಿ ಮತ್ತೆ ಆಚರಣೆಗೆ ತಂದರು.
  • ಭಾರತದ ಎಲ್ಲ ಸಮಾಜೋ-ಧಾರ್ಮಿಕ ಮತ್ತು ಆರ್ಥಿಕ-ರಾಜಕೀಯ ಅನಿಷ್ಟಗಳಿಗೆ ಮೂಲಕಾರಣಗಳೆಂದು ಬಸವಣ್ಣನವರು ವೇದಗಳು, ಆಗಮಗಳು, ಪುರಾಣಗಳು ಮತ್ತು ರಾಸ್ತ್ರಗಳನ್ನು ನಿರಾಕರಿಸಿದ್ದರೆ, ಪಂಚಾಚಾರ್ಯರು ಅವನ್ನೆಲ್ಲ ಮತ್ತೆ ಜೀವಂತಗೊಳಿಸಿದ್ದಾರೆ.
  • ಬಸವಣ್ಣನವರು ಮೂರ್ತಿಪೂಜೆ, ದೇವಾಲಯ ಸಂಸ್ಕೃತಿ ಮತ್ತು ಪೂಜಾರಿಕೆಯ ಮಧ್ಯಸ್ಥಿಕೆಗಳನ್ನು ನಿರಾಕರಿಸಿ. ದೇವರ ನೇರ ಅನುಸಂಧಾನಕ್ಕೆ ಇಷ್ಟಲಿಂಗವನ್ನು ಕೊಟ್ಟರು. ಕೆಳವರ್ಗದ ಜನರಿಗಿದ್ದ ದೇವಾಲಯ ಪ್ರವೇಶದ ನಿಷೇಧವನ್ನು ನಿವಾರಿಸಿದರು. ಆದರೆ ಪಂಚಾಚಾರ್ಯರು ಮತ್ತೆ ಅದೇ ಬ್ರಾಹ್ಮಣೀಯ ಪದ್ಧತಿ-ಸಂಸ್ಕೃತಿಗಳನ್ನು ಬಲಗೊಳಿಸಿದ್ದಾರೆ.
  • ಬಸವಣ್ಣನವರು, ಅನುಭವ ಮಂಟಪದ ಚಿಂತಕರ ಬೆಂಬಲದಿಂದ ನಿಸರ್ಗಸಹಜ ಬದುಕಿಗೆ ಹತ್ತಿರವಾದ ಸರಳ ಜನಪದ ಧರ್ಮವನ್ನು ಸ್ಥಾಪಿಸಿದರು. ಆದರೆ ಪಂಚಾಚಾರ್ಯರು ಅಂಧಶ್ರದ್ಧೆ, ಅರ್ಥಹೀನ ಆಚರಣೆ ಮತ್ತು ಮಾನವೀಯ ಅಸಮಾನತೆಗಳನ್ನು ಆಧರಿಸಿದ ಬ್ರಾಹ್ಮಣ ಧರ್ಮವನ್ನು ಉತ್ತೇಜಿಸಿದರು.
  • ಶರಣರು ಸ್ವರ್ಗ-ನರಕ, ಪಾಪ-ಪುಣ್ಯ, ಪುನರ್ಜನ್ಮ ಮತ್ತು ಚಾತುರ್ವರ್ಣಗಳಿಗೆ ಸಂಬಂಧಿಸಿದ ವೈದಿಕ ಪರಿಕಲ್ಪನೆಗಳನ್ನು ನಿರಾಕರಿಸಿದರೆ, ಪಂಚಾಚಾರ್ಯರು ಆ ನಂಬಿಕೆಗಳಿಗೆ ನೀರು ಗೊಬ್ಬರ ಕೊಟ್ಟು ಬೆಳೆಸುತ್ತಿದ್ದಾರೆ.
  • ಬಸವಣ್ಣನವರು ಜಾತಿ-ಭೇದ, ಸ್ತ್ರೀ-ಪುರುಷ ಅಸಮಾನತೆ, ಸೂತಕ ಪ್ರಾಯಶ್ಚಿತ್ತಗಳ ನಂಬಿಕೆ ಮತ್ತು ಶ್ರಾದ್ಧ, ಪಿಂಡ, ಪಿತೃಪಕ್ಷಗಳಂತಹ ಅವೈಜ್ಞಾನಿಕ ಆಚರಣೆಗಳ ಪದ್ಧತಿಯನ್ನು ನಿರಾಕರಿಸಿದರು. ಆದರೆ ಪಂಚಾಚಾರ್ಯರು ಮತ್ತು ಅವರ ಹಿಂಬಾಲಕ ವಿದ್ವಾಂಸರು, ವೀರಶೈವ ಬ್ರಾಹ್ಮಣರು, ವೀರಶೈವ ಕ್ಷತ್ರಿಯರು, ವೀರಶೈವ ವೈಶ್ಯರು ಮತ್ತು ವೀರಶೈವ ಶೂದ್ರರಿದ್ದಾರೆ ಎಂದು ವಾದಿಸುತ್ತಾರೆ. ಸ್ತ್ರೀಯರನ್ನು ಬ್ರಾಹ್ಮಣರು ಕಂಡಂತೆಯೇ ಕಾಣುತ್ತಾರೆ.
  • ಬಸವಣ್ಣನವರು ದೈಹಿಕಶ್ರಮ ಮತ್ತು ಪ್ರಾಮಾಣಿಕ(ಕಾಯಕ)ವನ್ನು ಬೋಧಿಸಿದರು. ದುಡಿಮೆಯಲ್ಲಿ ಹೆಚ್ಚಾಗಿ ಬಂದುದನ್ನು ಅಗತ್ಯವಿದ್ದವರಿಗೆ ಹಂಚಬೇಕೆಂದು (ದಾಸೋಹ) ಹೇಳಿದರು. ಆದರೆ ಪಂಚಾಚಾರ್ಯರು ಜಾತಿಬದ್ಧ ಕೆಲಸ (ಕರ್ಮ)ವನ್ನೇ ಸಮರ್ಥಿಸಿ, ವೀರಶೈವ ಬ್ರಾಹ್ಮಣರಿಗೆ ದೈಹಿಕ ಶ್ರಮದ ಅಗತ್ಯವಿಲ್ಲ ಎನ್ನುತ್ತಾರೆ. ಅವರು ದಾನ ಪದ್ಧತಿಯನ್ನು ಬೋಧಿಸುತ್ತಾರೆಯೇ ವಿನಃ ದಾಸೋಹ ಪದ್ಧತಿಯನ್ನಲ್ಲ.
  • ಬಸವಣ್ಣನವರು ಮುಹೂರ್ತ, ವಿಶೇಷ ಪೂಜೆ, ಪಂಚಾಂಗ ಇತ್ಯಾದಿ ನಂಬಿಕೆಗಳನ್ನೆಲ್ಲ ತಿರಸ್ಕರಿಸಿದ್ದರು. ಆದರೆ ಪಂಚಾಚಾರ್ಯರು ತಮ್ಮ ಕಾರ್ಯಗಳನ್ನು ಪಂಚಾಂಗವನ್ನು ಆಧರಿಸಿಯೇ ಮಾಡುತ್ತಾರೆ.
  • ಪಂಚಾಚಾರ್ಯರು ಬ್ರಾಹ್ಮಣ ಧರ್ಮಗುರುಗಳಂತೆಯೇ ಜೊತೆಯಲ್ಲಿ ಧ್ವಜದ ಕೋಲು ಮತ್ತು ಬೆಳ್ಳಿ ಪಾತ್ರೆ ಒಯ್ಯುವುದು, ಹೋಮ-ಹವನಗಳನ್ನು ಆಚರಿಸುವುದು, ಗೋತ್ರಗಳನ್ನು ಪಾಲಿಸುವುದು ಇತ್ಯಾದಿ ಅಂಧಾನುಕರಣೆಗಳನ್ನೇ ಮುಂದುವರಿಸಿದ್ದಾರೆ. ಇವೆಲ್ಲವೂ ಬಸವಣ್ಣನವರ ವೈಚಾರಿಕ ಶರಣಧರ್ಮಕ್ಕೆ ವಿರುದ್ಧವಾದ ಆಚರಣೆಗಳು.
  • ಬಸವಣ್ಣ ಮತ್ತು ಇತರ ಶರಣರು ಜನಭಾಷೆಯಾದ ಕನ್ನಡದಲ್ಲಿ ಬರೆದರು; ಕನ್ನಡದಲ್ಲಿ ಹೇಳಿದರು. ನಂತರ ಅವರ ಅನುಯಾಯಿಗಳೂ 13ನೆಯ ಶತಮಾನದಲ್ಲೂ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅದನ್ನು ಮುಂದುವರೆಸಿದರು. ಆದರೆ ಚತುರಾಚಾರ್ಯರು ಪ್ರವೇಶಿಸಿದ ನಂತರ ಅದೆಲ್ಲ ಕಣ್ಮರೆಯಾಗುತ್ತ ದೇವರ ಭಾಷೆ ಎನ್ನಲಾಗಿರುವ ಸಂಸ್ಕೃತಕ್ಕೆ ಬಲಿಯಾಯಿತು. ಲಿಂಗಾಯತರ ಆಚರಣೆಗಳಲ್ಲೂ ಸಂಸ್ಕೃತ ಪ್ರವೇಶಿಸಿತು. ಕ್ರಿ.ಶ. 1860ರಿಂದ ಸಂಸ್ಕೃತ ಶಾಲೆಗಳು ಆರಂಭವಾದವು. ಇಂದಿಗೂ ಕೆಲವು ಲಿಂಗಾಯತ ಮಠಾಧೀಶರೂ ಆ ಸಂಸ್ಕೃತದ ಗುಂಗಿನಿಂದ ಹೊರಬರಲಾಗುತ್ತಿಲ್ಲ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆಗುಂಡಿ ಬಗ್ಗೆ ಸಾರ್ವಜನಿಕರು ಮಾಹಿತಿ‌ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಮಾತ್ರ: ಡಿಸಿಎಂ ಡಿ ಕೆ ಶಿವಕುಮಾರ್

ರಸ್ತೆಗುಂಡಿಗಳನ್ನು ಸಾರ್ವಜನಿಕಕರು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Download Eedina App Android / iOS

X