ಹಾಸನ ನಗರದಲ್ಲಿರುವ ಎನ್.ಆರ್.ವೃತ್ತದ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಚೇರಿಯ ಅಕೌಂಟ್ ಸೂಪರಿಡೆಂಟ್ ರಾಮಚಂದ್ರು ಹಾಗೂ ಎಫ್‌ಡಿಎ ಲತಾ ಅವರು ಕಾಮಗಾರಿ ಬಿಲ್ ಮಂಜೂರಾತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೇಲೂರು ನಿವಾಸಿ ಶಶಿ ಎಂಬುವವರಿಂದ ತಲಾ ಒಂದು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಚಂದ್ರಶೇಖರ್ ಮತ್ತು ಶಿಲ್ಪಾ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಲಂಚದ ಹಣದ ಸಮೇತ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಹಾಸನ | ದಸರಾ ಆಹ್ವಾನ ತಿರಸ್ಕರಿಸುವಂತೆ ಸಾಹಿತಿ ಬಾನು ಮುಷ್ತಾಕ್‌ಗೆ ಮನವಿ