ಕಾರ್ಕಳದಲ್ಲಿ ನಿನ್ನೆ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ನಡೆದ ಜನಾಗ್ರಹ ಸಭೆಯಲ್ಲಿ ದ್ವೇಷ ಭಾಷಣ ಮಾಡಿದ ಅರೋಪದ ಮೇರೆಗೆ ಹಿಂದು ಐಕ್ಯ ವೇದಿಕೆ ಕೇರಳ ಇದರ ರವೀಶ ತಂತ್ರಿ ಕುಂಟಾರು ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದೂರು ಗ್ರಾಮದ ಕುಕ್ಕುಂದೂರು ಗ್ರಾಮ ಪಂಚಾಯತ್ ಎದುರುಗಡೆ ಮೈದಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ವತಿಯಿಂದ ಜನಾಗ್ರಹ ಸಭೆ ನಡೆದಿದ್ದು, ಈ ಸಭೆಯಲ್ಲಿ ರವೀಶ ತಂತ್ರಿ ಕುಂಟಾರು ಹಿಂದೂ ಐಕ್ಯ ವೇದಿಕೆ ಕೇರಳ ಇವರು ದಿಕ್ಸೂಚಿ ಭಾಷಣಗಾರರಾಗಿ ಭಾಗವಹಿಸಿದ್ದರು.
ಇವರು ಸಭೆಯಲ್ಲಿ ಸಾರ್ವಜನಿರನ್ನು ಉದ್ದೇಶಿಸಿ ಉದ್ದೇಶಪೂರ್ವಕವಾಗಿ ಶಾಂತಿಭಂಗ ಕೃತ್ಯದಲ್ಲಿ ತೊಡಗಿ ದ್ವೇಷಾಸೂಯೆಗೆ ವೈಮನಸಿಗೆ, ಶತ್ರುತ್ವಕ್ಕೆ ಪ್ರಚೋದನೆ ನೀಡಿ ದ್ವೇಷಪೂರಿತ ಭಾಷಣ ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ : 114/2025. ಕಲಂ. 353(2) 196(1)(a) BNS 2023ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.