ಎ ನಾರಾಯಣ, ಪ್ರೊ. ನಿರಂಜನಾರಾಧ್ಯ ಸೇರಿ 20 ಮಂದಿ ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿ ನೇಮಕ

Date:

Advertisements

ರಾಜ್ಯ ಸರಕಾರವು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ., ಉನ್ನತ ಶಿಕ್ಷಣ ತಜ್ಞ ಎ ನಾರಾಯಣ, ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮೈತ್ರೇಯಿ ಕೃಷ್ಣನ್ ಸೇರಿದಂತೆ 20 ಮಂದಿ ಅಧಿಕಾರೇತರ ಸದಸ್ಯರನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ ನಾಮ ನಿರ್ದೇಶನ ಮಾಡಿದೆ.

ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ., ಉನ್ನತ ಶಿಕ್ಷಣ ತಜ್ಞ ಎ. ನಾರಾಯಣ, ಆರೋಗ್ಯ ತಜ್ಞೆ ಲತಾರಾವ್ ಶೇಷಾದ್ರಿ, ಕೃಷಿ ತಜ್ಞೆ ವಿ. ಗಾಯತ್ರಿ, ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮೈತ್ರೇಯಿ ಕೃಷ್ಣನ್, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮಧುಭೂಷಣ್, ಪರಿಸರ ತಜ್ಞ ನಾಗೇಶ್ ಹೆಗಡೆ ಅಧಿಕಾರೇತರ ಸದಸ್ಯರಾಗಿ ನೇಮಕವಾಗಿದ್ದಾರೆ.

ಪರಿಸರ ತಜ್ಞರಾದ ಪ್ರತಾಪ್ ಹೆಗ್ಡೆ, ಡಾ. ಹರೀಶ್ ಹಂದೆ, ಭೂ ವಿಜ್ಞಾನಿಗಳಾದ ವಿ.ಎಸ್. ಪ್ರಕಾಶ್, ಡಾ. ಮಂಜುನಾಥ್ ಎಚ್., ಅರ್ಥಶಾಸ್ತ್ರಜ್ಞ ಪ್ರೊ. ನರೇಂದ್ರಪಾಣಿ,ಮಾನವ ಅಭಿವೃದ್ಧಿ ತಜ್ಞ ಡಾ. ಟಿ.ಆರ್. ಚಂದ್ರಶೇಖರಯ್ಯ, ಪ್ರಾದೇಶಿಕ ಅಸಮತೋಲನ ತಜ್ಞರಾದ ಡಾ. ರಝಾಕ್ ಉಸ್ತಾದ್ ಎಚ್., ಸಂಗೀತ ಎಮ್.ಕೆ., ಕಾನೂನು ತಜ್ಞ ಮುಕುಂದ ಬೆಳಗಲಿ, ಅರ್ಥಶಾಸ್ತ್ರಜ್ಞ ಡಾ. ಬಿ.ಎಚ್. ನಾಗೂರ, ಸಂಶೋಧನಾ ತಜ್ಞ ಮೋಹನದಾಸ್ ಹೆಗಡೆ, ಸಮಾಜ ಸೇವಕ ಅಲಿಬಾಬಾ ಅಧಿಕಾರೇತರ ಸದಸ್ಯರಾಗಿ ನೇಮಕವಾಗಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ

ಆಯೋಗಕ್ಕೆ ಅಧಿಕಾರಿ ಸದಸ್ಯರಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನೇಮಕಗೊಂಡಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ.

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ‘ಅನುಬಂಧ-ಎ’ನಲ್ಲಿರುವ ಪಟ್ಟಿಯ ಅನ್ವಯ ಆಯೋಗದ ಅಧಿಕಾರೇತರ ಸದಸ್ಯರಿಗೆ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.ಆಯೋಗದ ಸಭೆಗಳಿಗೆ ಹಾಜರಾಗುವ ಅಧಿಕಾರೇತರ ಸದಸ್ಯರಿಗೆ ದಿನವೊಂದಕ್ಕೆ ಮೂರು ಸಾವಿರ ರೂ. ಸಭಾ ಭತ್ಯೆಯನ್ನು ಮಂಜೂರು ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಎಂದಿಗೂ ಆದರ್ಶಪ್ರಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕ್ಟೋಬರ್ 2ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ...

5 ಹುಲಿ, 20 ನವಿಲು, 19 ಕೋತಿಗಳ ಸಾವು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು,...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

Download Eedina App Android / iOS

X