ಒಂದು ಸಮಾಜವು ಕೆಟ್ಟು ಹೋದ ಸಮಯದಲ್ಲಿ ಜನರ ಕಲ್ಯಾಣಕ್ಕಾಗಿ ದೇವನು ಆಯಾಯ ಕಾಲದಲ್ಲಿ ಮನುಷ್ಯರ ನಡುವಿನಿಂದಲೇ ಪ್ರವಾದಿಗಳನ್ನು ಸ್ರಷ್ಟಿಸುತ್ತಾನೆ. ಈ ಬಗ್ಗೆ ಬೈಬಲ್ ಮತ್ತು ಅದಕ್ಕಿಂತ ಮುಂಚೆ ಬಂದ ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ. ಅದರಂತೆ ಪ್ರವಾದಿ ಮುಹಮ್ಮದರೂ ಕೂಡಾ ದೇವನ ವತಿಯಿಂದ ಭೂಮಿಯ ಮೇಲೆ ನಿಯುಕ್ತಗೊಂಡ ಪ್ರವಾದಿ ಆಗಿರುತ್ತಾರೆ. ಅವರು ದೇವನ ಆದೇಶದಂತೆ ನಡೆದು ಬದುಕಿ ತೋರಿಸಿದರು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಘಟಕ, ಹೋಟೆಲ್ ಕೆ. ಒನ್. ನಲ್ಲಿ ಹಮ್ಮಿಕೊಂಡ್ಡ ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ ಎಂಬ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿರ್ಮಲ್ ಕುಮಾರ್ ಹೆಗ್ಡೆಯವರು, ಈಗಿನ ಕಾಲಘಟ್ಟದಲ್ಲಿ ಪ್ರತಿಯೊಂದು ಜಾತಿ ಧರ್ಮದವರು, ತಮ್ಮ ತಮ್ಮ ನಿಲುವೇ ಸರಿ ಎನ್ನುತ್ತಾ ಒಂದು ಕಡೆ ಕೋಮುವಾದಕ್ಕೆ, ತಮ್ಮ ಜಾತಿ ವಾತ್ಸಲ್ಯಕ್ಕೆ ಮಹತ್ವ ಕೊಡುವ ಕಾರಣ, ಸಮಾಜದಲ್ಲಿ ಮಾನವೀಯತೆ, ಸೌಹಾರ್ಧತೆ ಕೆಡುತ್ತದೆ. ಆದ್ದರಿಂದ ನಾವು ಹೃದಯ ವೈಶಾಲ್ಯಾ ಮೆರೆತು ಅನೋನ್ಯತೆಯಿಂದ ಬದುಕಬೇಕು ಎಂದು ತಿಳಿಸಿದರು.
ಜಮಾ ಅತೆ ಇಸ್ಲಾಮೀ ಹಿಂದ್ ನ ಮಂಗಳೂರು ವಲಯ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ರವರು ಮಾತಾಡುತ್ತಾ, ಪ್ರವಾದಿ ಮುಹಮ್ಮದ್ ಸ. ರವರು ಸಮಾಜದಲ್ಲಿ ಇರುವ ಬಡ್ಡಿ, ವ್ಯಭಿಚಾರ, ಮಧ್ಯಪಾನ, ಜೂಜಾಟ, ಮೋಸ, ವಂಚನೆ, ಅವ್ಯವಹಾರ ಮಿತವಿಲ್ಲದ ಬಹು ಪತ್ನಿತ್ವ ದ ಬಗ್ಗೆ ಕುರ್ ಆನ್ ನ ಆದೇಶದಂತೆ ಯಾವಾಗ ಧ್ವನಿ ಎಬ್ಬಿಸಿದರೋ, ಅಂದಿನಿಂದ ಪ್ರಾಮಾಣಿಕ ಮತ್ತು ಸತ್ಯವಂತ ಎಂಬ ಬಿರುದಾ0ಕಿತ ವ್ಯಕ್ತಿಯೆಂದು ನೋಡದೆ ಅರಬರು ಪ್ರವಾದಿಯನ್ನು ಮಕ್ಕಾ ತೊರೆಯುವಂತೆ ಮಾಡುತ್ತಾರೆ.

ಆದರೆ ಅದೇ ಪ್ರವಾದಿ, ಜನರೊಂದಿಗೆ ಉತ್ತಮವಾಗಿ ವರ್ತಿಸಲು, ಮರ್ದಿತರಿಗೆ ನೆರವಾಗಲು, ವಿಧವೆಯರಿಗೆ ಆಶ್ರಯ ನೀಡಲು, ಜನರೊಂದಿಗೆ ಕರುಣೆ ತೋರಲು, ಮುಗುಳು ನಗೆಯೊಂದಿಗೆ ವರ್ತಿಸಲು , ಜನರೊಂದಿಗೆ ನ್ಯಾಯ ಪಾಲಿಸಲು ಬೋಧಿಸುತಿದ್ದರು. ಅವರು ಕೆಟ್ಟು ಹೋಗಿದ್ದ ಅರಬ್ ರಾಷ್ಟ್ರದಲ್ಲಿ 23 ವರ್ಷಗಳಷ್ಟು ಕಾಲ ಸದ್ಬೋಧನೆ ಮಾಡುತ್ತಾ, ಕೆಡುಕುಗಳನ್ನು ಒಳಿತುಗಳ ಮೂಲಕ ದೂರಿಕರಿಸುತ್ತಾ, ನ್ಯಾಯ ಪಾಲಿಸುತ್ತಾ, ಅನೋನ್ಯತೆಯಿಂದ, ಸಹೋದರತೆಯಿಂದ, ಸೌಹಾರ್ದಾತೆಯಿಂದ ಕೂಡಿದ ಸಮಾಜವನ್ನು ಕಟ್ಟುತ್ತಾರೆ. ಅವರ ಬೋಧನೆಯನ್ನು ಇಂದೂ ಜನರು ಪಾಲಿಸಿ ಅನುಸರಿಸಿದರೆ ನಮ್ಮಲ್ಲಿಯೂ ಕೂಡಾ ಅಂತಹ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು.
ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಮುಹಮ್ಮದ್ ಮೌಲಾ ರವರು ಅಧ್ಯಕ್ಶೀಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ” ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ’ ಮತ್ತು ಪ್ರವಾದಿ ಮುಹಮ್ಮದರನ್ನು (s) ಅರಿಯಿರಿ. ಎಂಬ ಪುಸ್ತಕ ಗಳನ್ನು ಬಿಡುಗಡೆ ಗೊಳಿಸಲಾಯಿತು.

ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು.
ಕಾಪು ತಾಲೂಕು ಘಟಕದ ಅಧ್ಯಕ್ಷರು ನಸೀರ್ ಅಹಮದ್ ರವರು ಸ್ವಾಗತ ಭಾಷಣ ಮಾಡಿದರು.
ಒಕ್ಕೂಟದ ಜಿಲ್ಲಾ ಸಮಿತಿಯ ಸದಸ್ಯರು ಅನ್ವರ್ ಅಲಿ ಕಾಪು ಪ್ರಾಸ್ತವಿಕ ಭಾಷಣ ಮಾಡಿದರು. ಕೋಶಾಧಿಕಾರಿ ಬಿ. ಎಂ. ಮೊಯಿದಿನ್ ರವರು ಧನ್ಯವಾದ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷರು ಜನಾಬ್ ಶಭಿಹ್ ಅಹಮದ್ ಕಾಝಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ರವರು ಕಾರ್ಯಕ್ರಮ ನಿರೂಪಿಸಿದರು.
