ದೆಹಲಿ ಗಲಭೆ ಪ್ರಕರಣ: ಎಫ್‌ಐಆರ್ ಸುಳ್ಳು ಸಾಕ್ಷ್ಯಗಳುಳ್ಳ ‘ಹಾಸ್ಯ’ ಎಂದ ಉಮರ್ ಖಾಲಿದ್

Date:

Advertisements

2020ರಲ್ಲಿ ನಡೆದಿದ್ದ ದೆಹಲಿ ಗಲಭೆ ಪ್ರಕರಣದಲ್ಲಿ ‘ಪಿತೂರಿ’ ರೂಪಿಸಿದ್ದಾರೆಂಬ ತಮ್ಮ ಮೇಲಿನ ಆರೋಪವನ್ನು ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್‌ ಮತ್ತೊಮ್ಮೆ ತಿರಸ್ಕಿರಿಸಿದ್ದಾರೆ. ತಮ್ಮ ವಿರುದ್ಧದ ಎಫ್‌ಐಆರ್‌ ಸುಳ್ಳು ಸಾಕ್ಷ್ಯಗಳನ್ನು ಹೊಂದಿರುವ ‘ಹಾಸ್ಯ/ತಮಾಷೆ’ ಎಂದಿದ್ದಾರೆ.

ಗಲಭೆಗೆ ಪಿತೂರಿ ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಉಮರ್ ಖಾಲಿದ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಕಳೆದ ಐದು ವರ್ಷಗಳಿಂದ ಖಾಲಿದ್‌ ಸರಿಯಾದ ವಿಚಾರಣೆ, ಜಾಮೀನು ದೊರೆಯದೆ ಸೆರೆವಾಸ ಅನುಭವಿಸುತ್ತಿದ್ದಾರೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಮೀರ್ ಬಾಜ್‌ಪೈ ಗುರುವಾರ ಪ್ರಕರಣ ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗಿದ್ದ ಖಾಲಿದ್, ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

“ನಾನು ಈ ‘ಹಾಸ್ಯಾಸ್ಪದ’ ಎಫ್‌ಐಆರ್‌ನ ಕಾರಣದಿಂದಾಗಿ ಐದು ವರ್ಷಗಳ ಕಾಲ ಬಂಧನದಲ್ಲಿದ್ದೇನೆ. ಈ ಎಫ್‌ಐಆರ್ ಕಾನೂನಿನ ಚೌಕಟ್ಟಿನಲ್ಲಿ ಪಾವಿತ್ರ್ಯತೆಯನ್ನು ಹೊಂದಿಲ್ಲ. ಇದೊಂದು ಸುಳ್ಳು ಸಾಕ್ಷ್ಯಗಳಿಂದ ಕೂಡಿದ ಎಫ್‌ಐಆರ್‌” ಎಂದು ಖಾಲಿದ್ ವಾದಿಸಿದ್ದಾರೆ.

ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್ ಪೈಸ್, “51 ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ವಾದಿಸಿ, ಖಾಲಿದ್ ವಿರುದ್ಧ ಪ್ರಾಸಿಕ್ಯೂಷನ್ ದಾಖಲಿಸಿರುವ ಎಫ್‌ಐಆರ್ ಅನಗತ್ಯವಾದದ್ದು. ಯಾಕೆಂದರೆ, ಈ ಸಾವುಗಳ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದೆ. ಆ ಸಾವುಗಳ ಪ್ರಕರಣವನ್ನು 751 ವಿಭಿನ್ನ ಎಫ್‌ಐಆರ್‌ಗಳಿಂದ ತನಿಖೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಪ್ರಾಸಿಕ್ಯೂಷನ್ ಆರಂಭದಲ್ಲಿ ಒಬ್ಬ ವ್ಯಕ್ತಿಯನ್ನು (ಖಾಲಿದ್) ಪ್ರಕರಣದಲ್ಲಿ ಸಿಲುಕಿಸಲು ನಿರ್ಧರಿಸಿತು. ನಂತರ, ಅದಕ್ಕೆ ಬೇಕಾದಂತೆ ಸುಳ್ಳು/ನಕಲಿ ದಾಖಲೆಗಳನ್ನು ರೂಪಿಸಿ ಆರೋಪಪಟ್ಟಿ ಸಲ್ಲಿಸಿದೆ. ಈ ಮೂಲಕ ಖಾಲಿದ್ ಅವರನ್ನು ಗುರಿಯಾಗಿಸಿಕೊಂಡಿದೆ” ಎಂದು ಆರೋಪಿಸಿದ್ದಾರೆ

“ನೀವು ಮೊದಲು ‘ಇಸ್ಕೋ ಪಕಡ್ನಾ ಹೈ’ (ಈ ವ್ಯಕ್ತಿಯನ್ನು ಹಿಡಿಯಬೇಕು) ಎಂದು ನಿರ್ಧರಿಸಿ… ನಂತರ ರಿವರ್ಸ್ ಎಂಜಿನಿಯರಿಂಗ್ (ಆರೋಪ/ದಾಖಲೆ ರೂಪಿಸುವಿಕೆ” ನಡೆಯುತ್ತದೆ” ಎಂದು ಪೈಸ್ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?

ಈಶಾನ್ಯ ದೆಹಲಿಯಲ್ಲಿ ನಡೆದ 2020 ರ ಗಲಭೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಗಳ ವಿವಿಧ ಆದೇಶಗಳನ್ನು ಉಲ್ಲೇಖಿಸಿದ ಪೈಸ್, ಗಲಭೆ ಪ್ರಕರಣಗಳನ್ನು ಹಲವು ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಧೀಶರು ತನಿಖಾ ಸಂಸ್ಥೆಯನ್ನು ಟೀಕಿಸಿದ್ದಾರೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

“ದಯವಿಟ್ಟು ಆರೋಪಪಟ್ಟಿಯಲ್ಲಿ ಇರುವ ಸುಳ್ಳುತನ ಮತ್ತು ಅದು ಸುಳ್ಳುಗಳನ್ನು ಹರಡುವ ರೀತಿಯನ್ನು ನೋಡಿ. ಈತ (ಖಾಲಿದ್) ಗಲಭೆ ನಡೆದ ಸ್ಥಳದಲ್ಲಿ ಅಥವಾ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ” ಎಂದು ನ್ಯಾಯಾಧೀಶರಿಗೆ ಪೈಸ್ ಮನವಿ ಮಾಡಿದ್ದಾರೆ.

ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಹಬ್ಬದ ದಿನವೇ ಸಾರ್ವಜನಿಕರಿಗೆ ದರ ಏರಿಕೆಯ ಶಾಕ್‌; ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಆಯುಧ ಪೂಜೆ ಹಬ್ಬದ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ...

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Download Eedina App Android / iOS

X