ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ ಬಳಿ ಮೇಯಲು ಹೋಗಿದ್ದ 38 ಕುರಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ನಾಲ್ಕು ಕುರಿಗಳು ಸಾವನ್ನಪ್ಪುವ ಸ್ಥಿತಿಯಲ್ಲಿವೆ. ಕುರಿಗಳ ಹಿಂಡು ಬೆಳಗಾವಿಯ ಖಡಕಲಾಟ ಗ್ರಾಮದ ಸುರೇಶ ಬೀರಾ ಅವಡಖಾನ ಎಂಬವರಿಗೆ ಸೇರಿದ್ದಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಪಶು ವೈದ್ಯರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಕಳೆದ ಬುಧವಾರ 12, ಗುರುವಾರ 26 ಕುರಿಗಳು ಸಾವನ್ನಪ್ಪಿವೆ.
ವೈದ್ಯರ ಪ್ರಕಾರ, ಕುರಿಗಳು, ಗಳಲೆ ರೋಗ, ಕರಳು ಬೇನೆ ಅಥವಾ ನೀಲಿ ನಾಲಿಗೆ ಕಾಯಿಲೆಯಿಂದ ಸಾವನ್ನಪ್ಪಿರುವ ಅಥವಾ ಸಸಿಮಡಿಯ ನೀರು ಕುಡಿಯುವುದರಿಂದಲೂ ಸಾವು ಸಂಭವಿಸಿರಬಹುದು ಎನ್ನಲಾಗಿದೆ.