ಶಿವಮೊಗ್ಗ | ಡಿಕೆಶಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಿಗದ ‘ಸ್ಥಾನ’!

Date:

Advertisements

ಶಿವಮೊಗ್ಗ ಭದ್ರಾವತಿ ತಾಲೂಕಿನ ಬಿ ಆರ್ ಪಿಯ ಭದ್ರಾ ಜಲಾಶಯಕ್ಕೆ ಇಂದು ಜಲಸಂಪನ್ಮೂಲ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ತುಂಬಿದ ಭದ್ರೆಗೆ ಬಾಗಿನ ಅರ್ಪಿಸಿದರು.

186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 185 ಅಡಿ ನೀರು ಸಂಗ್ರಹವಾಗಿದ್ದು ಇಂದು ಡಿಕೆಶಿ ಬಾಗಿನ ಅರ್ಪಿಸಿರುವುದು ವಿಶೇಷವಾಗಿತ್ತು.

ಇಂದು ಭದ್ರಾ ಅಣೆಕಟ್ಟಿನ ಬಾಗಿನ ಸಮಾರಂಭದಲ್ಲಿ ಭಾಗವಹಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭವಿಷ್ಯ ಉನ್ನತ ಹುದ್ದೆಯತ್ತ ಸಾಗುತ್ತಿದೆ ಎಂದು ಮಾರ್ಮಿಕವಾಗಿ ಅಭಿಪ್ರಾಯ ಪಟ್ಟರು.

IMG 20250912 WA0039

ಭದ್ರಾ ಅಣೆಕಟ್ಟು ಶಿವಮೊಗ್ಗ, ಭದ್ರಾವತಿ, ತರೀಕೆರೆ, ದಾವಣಗೆರೆ ಜಿಲ್ಲೆಗಳ ಸಾವಿರಾರು ಎಕರೆ ರೈತರ ಹೊಲಗಳಿಗೆ ಜೀವನಾಡಿಯಾಗಿ ಪರಿಣಮಿಸಿದೆ ಎಂದರು.

ಇನ್ನು ಕಾಂಗ್ರೆಸ್‌ ಸರ್ಕಾರ ಬಂದ ನಂತರ ಮಳೆ ಬರಲ್ಲ ಎಂದವರ ಮಾತಿಗೆ ತಿರುಗೇಟು ನೀಡಿದ ಅವರು, “ಇಂದು ಎಲ್ಲಾ ಅಣೆಕಟ್ಟುಗಳು ತುಂಬಿಕೊಂಡಿವೆ. ರೈತರ ಮುಖದಲ್ಲಿ ಸಂತೋಷ ಮೂಡಿದೆ’ ಎಂದರು.

ಗೋಪಾಲಕೃಷ್ಣ ಮತ್ತು ಪ್ರಭಾ ಮಲ್ಲಿಕಾರ್ಜುನ ಅವರಿಗೆ ತಲಾ ಕೋಟಿ, ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ ಶಿವಕುಮಾ‌ರ್, “ಬೇರು ಇಲ್ಲದಿದ್ದರೆ ಮರ ಬೆಳೆದು ಬರುವುದಿಲ್ಲ. ಹಾಗೆಯೇ ನಂಬಿಕೆ ಉಳಿಸಿಕೊಳ್ಳಬೇಕು” ಎಂದರು.

1002225187

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕೇಂದ್ರದಿಂದ 5300 ಕೋಟಿ ಅನುದಾನ ಸಿಗಬೇಕಿತ್ತು. ಆದರೆ ಒಂದು ರೂಪಾಯಿಯೂ ಕೊಡಲಿಲ್ಲ. ನಮ್ಮ ಸಂಸದರು ಕೇಳದೆ ಕೂತಿದ್ದಾರೆ. ಕೇಳಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಬರಲಿ” ಎಂದು ಬಿಜೆಪಿ ಸಂಸದರನ್ನು ಕಟುವಾಗಿ ಟೀಕಿಸಿದರು.

“ಕೈ ಸರ್ಕಾರ ಅಧಿಕಾರದಲ್ಲಿದ್ದರೆ ದಾನ-ಧರ್ಮ ನಡೆಯುತ್ತದೆ. ಉಚಿತ ವಿದ್ಯುತ್, ಉಚಿತ ಬಸ್‌, ಮಹಿಳೆಯರಿಗೆ 2000 ರೂ. ಸಹಾಯ ನಮ್ಮ ಸರ್ಕಾರದ ಜನಪರ ತೀರ್ಮಾನಗಳು.

ಇತಿಹಾಸದಲ್ಲಿ ಯಾರೂ ನೀಡದ ರೀತಿಯ ಕಲ್ಯಾಣ ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು, “ಬಯಲುಸೀಮೆಯ ರೈತರ ಬವಣೆ ನೀಗಿಸಲು ಭದ್ರಾ ನೀರು ಸಹಕಾರಿಯಾಗಿದೆ. ರೈತರಿಗೆ ಸಂಬಳವಿಲ್ಲ, ಲಂಚವಿಲ್ಲ, ಆದರೆ ಅವರ ಶ್ರಮವನ್ನು ಉಳಿಸುವ ಜವಾಬ್ದಾರಿ ನಮ್ಮದು” ಎಂದು ಹೇಳಿದರು.

1002225160

ಈ ಒಂದು ವೇದಿಕೆಯ ಕಾರ್ಯಕ್ರಮದಲ್ಲಿ ಐಜಿಪಿ, ಎಸ್ಪಿ, ಜಿಲ್ಲಾಧಿಕಾರಿ ಅವರೆ ಸೈಡ್ ನಲ್ಲಿ ನಿಂತಿದ್ದು, ಕಾರ್ಯಕ್ರಮಕ್ಕೆ ಕೈಹಿಡಿದಿರುವ ಸಂಗತಿ ಕಂಡು ಬಂದಿದೆ.

ಬಾಗಿನ ಮತ್ತು ಬಿಆರ್ ಪಿಯಲ್ಲಿ ನೂತನ ಐಬಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೈಡ್ ನಲ್ಲಿ ನಿಲ್ಲಿಸಿ ಕಾರ್ಯಕ್ರಮ ನಡೆಸಿರುವುದು ರಾಜಕೀಯ ಜನಪ್ರತಿನಿಧಿಗಳ ಮೈಲುಗೈ ಸೂಚಿಸುತ್ತದೆ.

ಡಿಕೆಶಿ ಭಾಷಣದಲ್ಲಿಯೇ ಅವರು ಅವರನ್ನ ವೇದಿಕೆಗೆ ಕರೆಯಿಸದೆ ಇರುವುದು ದುರಂತವಾಗಿತ್ತು.

ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆಶಿ ಕುರಿತು ಹಾಡು ;

ಬಿಆರ್ ಪಿಯಲ್ಲಿ ಬಾಗಿನ ಅರ್ಪಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆ ಸಾಹೇಬನ ಹಾಡಿನ ಅಬ್ಬರ ಜೋರಾಗಿತ್ತು. ಇದು ಸಹ ಕಾನೂನು ಬಾಹಿರವಾಗಿದ್ದರೂ ಯಾವುದೇ ಕಾರ್ಯಕ್ರಮ ಉಲ್ಲಂಘನೆಯಾಗಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X