“ಲಿಂಗ ಸಮಾನತೆ ಎಂಬುವುದು ಒಂದು ಪ್ರಮುಖ ಸಾಮಾಜಿಕ ತತ್ವವಾಗಿದ್ದು, ಪುರುಷರು, ಮಹಿಳೆಯರು ಮತ್ತು ಇತರ ಲಿಂಗಿಗಳೆಲ್ಲರೂ ಸಮಾನ ಹಕ್ಕು, ಅವಕಾಶ, ಗೌರವ ಮತ್ತು ತಿರ್ಮಾನಗಳಲ್ಲಿ ಸಮನಾಗಿ ಪಾಲ್ಗೊಳ್ಳಬೇಕು ಎಂಬುವುದನ್ನು ಒತ್ತಿ ಹೇಳುತ್ತದೆ” ಎಂದು ಲಿಂಗ ಸಮಾನತೆ ಜಾಗೃತಿ ಜಾಥದಲ್ಲಿ ಲೊಯೋಲ ವಿಕಾಸ ಕೇಂದ್ರ ಸಂಸ್ಥೆಯ ನಿರ್ದೇಶಕರಾದ ಫಾದರ್ ವಿನ್ಸೆಂಟ್ ಜೇಸನ್ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಹಾನಗಲ್ಲ, ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಮಂಗಳೂರು, ಗ್ರಾಮ ಪಂಚಾಯತ್ ಮಂತಗಿ ಹಾಗೂ ಲಕ್ಷ್ಮೀಪುರ ಗ್ರಾಮ ಸಂಯುಕ್ತ ಆಶ್ರಯದಲ್ಲಿ ಲಿಂಗ ಸಮಾನತೆ ಜಾಗೃತಿ ಜಾಥಾ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
“ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮಾನ ಸಾಧನೆ ಸಾಧ್ಯ ಮಹಿಳೆಯರು ಬಲಿಷ್ಠರಾಗಲಿ ಎಂಬುವುದಲ್ಲ, ಅವರು ಈಗಾಗಲೆ ಬಲಿಷ್ಠರು, ಅವರ ಬಲವನು ಗುರುತಿಸಿ ಅವಕಾಶ ನೀಡಿದರೆ ಸ್ವಾವಲಂಭಿಯಾಗಿ ಬೆಳೆಯುತ್ತಾರೆ” ಎಂದರು.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಘೋಷಣಾ ಫಲಕಗಳೊಂದಗೆ ಜಾಥಾ ಹೊರಟು ಘೋಷಣೆ ಕೂಗಿದರು. ಬೀದಿ ನಾಟಕದ ಪ್ರದರ್ಶನದೊಂದಿಗೆ ಲಿಂಗಸಮಾನತೆ ಕುರಿತು ಜಾಗೃತಿ ಮೂಡಿಸಿದರು.
ಲಕ್ಷ್ಮೀಪುರ ಗ್ರಾಮದ ಶಾಲೆಯ ಕೌಂಪೌಂಡ ಗೋಡೆಯ ಮೇಲೆ ಪರಿಸರ ಸಂರಕ್ಷಣೆ ಕುರಿತು ಚಿತ್ರ ಬಿಡಿಸುವ ಮೂಲಕ ಶಾಲಾ ಹೊರಾಂಗಣದಲ್ಲಿ ಶ್ರಮಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಪುರ ಗ್ರಾಮಸ್ಥರು, ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಸಂತ ಅಲೋಶಿಯಸ್ ವಿಶ್ವವಿಧ್ಯಾಲಯದ ವಿಧ್ಯಾರ್ಥಿಗಳು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು. ಕಾರ್ಯಕ್ರವನ್ನು ಫಕ್ಕೀರೇಶ ಗೌಡಳ್ಳಿ ನಿರೂಪಿಸಿದರು. ಹೊನ್ನಮ್ಮ ಸ್ವಾಗತಿಸಿದರು, ಮೈಲಾರಿ ಅವರು ವಂದಿಸಿದರು.