ಹಾವೇರಿ | ಸ್ಥಳೀಯರಿಗೆ ಟೋಲ್ ಶುಲ್ಕ: ಕರವೇ ಪ್ರತಿಭಟನೆ

Date:

Advertisements

“ಸುಮಾರು ಹತ್ತು ವರ್ಷದಿಂದ ಸ್ಥಳಿಯವಾಗಿ ಟೊಲ್‌ಗಳು ಕಾರ್ಯನಿರ್ವಹಿಸುತ್ತಿದೆ. ಟೋಲ್‌ಗೆ ಸಂಬಂದಿಸಿದ ಏಜೇನ್ಸಿಗಳು ಸ್ಥಳೀಯರಿಗೆ ಮತ್ತು 3 ಕೀಮಿ ಸಂಬಂದಿಸಿದಂತಹ ಎಲ್ಲಾ ಹಳ್ಳಿಗಳ ವಾಹನ ಸವಾರರಿಗೆ ಟೋಲ್‌ ಶುಲ್ಕ ಇಲ್ಲದೆ ಬಿಡುವದು ಇರುತ್ತದೆ. ಆದರೆ ಸ್ಥಳೀಯರಿಗೆ ಶುಲ್ಕ ವಿಧಿಸುತ್ತಿರುವುದು ಖಂಡನೀಯ ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಹಂಸಭಾವಿ ಹತ್ತಿರದ ಟೋಲ್ ನಲ್ಲಿ ಸ್ಥಳೀಯರಿಗೂ ಶುಲ್ಕ ವಿಧಿತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಟೋಲ್ ಎದುರಿಗೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, “ಸ್ಥಳೀಯರಿಗೆ ಶುಲ್ಕವಿಲ್ಲದೆ ಬಿಡಬೇಕು ಎಂದು ಹಲವಾರು ಬಾರಿ ನಾವು ಹೋರಾಟ ಮಾಡಿದ್ದೇವೆ. ಆದರೆ ಈಗಿರುವ ಏಜೇನ್ಸಿಯವರು ‘ಯಾವುದೇ ವಾಹನಗಳನ್ನು ಬಿಡಬಾರದು’ ಎಂದು ತಮ್ಮ ಸಿಬ್ಬಂದಿಗೆ ಹೇಳಿರುವುದು ನಮ್ಮ ಗಮನಕ್ಕೆ ಬಂದಿದೆ” ಎಂದರು.

“ಒಂದು ಟೊಲ್‌ನಲ್ಲಿ ಸಾರ್ವಜನಿಕರಿಗೆ ಕೊಡಬೇಕಾದ ಮೂಲಭೂತ ಸೌಲಭ್ಯಗಳನ್ನು ನೀವು ಕೊಡುತ್ತಿಲ್ಲ. ಆದರೆ ಕೇವಲ ಟೊಲ್ ವಸೂಲಿಯ ಮೇಲೆ ಮಾತ್ರ ನಿಮ್ಮ ಗಮನ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಒಂದು ಟೋಲ್ ನಿಂದ ‘ಇನ್ನೊಂದು ಟೋಲ್ ಗೆ 60 ಕೀಮಿ ಅಂತರ ಇರಬೇಕು. ಸಾರ್ವಜನಿಕರಿಗೆ ತುರ್ತು ಆಂಬುಲೆನ್ಸ ವ್ಯವಸ್ತೆ, ಪ್ರಥಮ ಚಿಕಿತ್ಸೆ, ವಾಹನ ಸವಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಆದೇಶ ಇದ್ದರೂ ಯಾವುದೇ ಸೌಲಭ್ಯಗಳಿಲ್ಲ” ಅಸಮಾಧಾನ ವ್ಯಕ್ತಪಡಿಸಿದರು.

 “ರಾಣೇಬೆನ್ನೂರಿನಿಂದ ಹಿರೇಕೆರೂರವರೆಗೂ ಇರುವ ಕೆ ಆರ್ ಡಿ ಸಿ ಎಲ್ ರಸ್ತೆಯು ಇರುವುದು ಕೇವಲ 58 ಕೀಮಿ ಇರುತ್ತದೆ. ಇಷ್ಟರಲ್ಲಿಯೇ ಎರಡು ಟೋಲ್ ಇರುವದು ವಿಪರ್ಯಾಸ. ಕೇಂದ್ರ ಸರ್ಕಾರದ ಆದೇಶವನ್ನು ದಿಕ್ಕರಿಸಿ ಹಣ ಸಂಗ್ರಹ ಮಾಡುತ್ತಿರುವುದು ಹಗಲು ಧರೊಡೆ ಆಗಿದೆ. ನಾವು ಕಟ್ಟುತ್ತಿರುವ ತೇರಿಗೆ ಹಣದಿಂದದಿಂದ ರಸ್ತೆಗಳ ಸುಗಮ ಸಂಚಾರ ಆಗಬೇಕು. ಆದರೆ ರಸ್ತೆಯಾಗಿ ಹತ್ತು ವರ್ಷ ಕಳೇದರು ಯಾವೂದೆ ಮೂಲಭೂತ ಸೌಲಭ್ಯಗಳಿಲ್ಲದೆ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ” ಎಂದರು.

“ಈ ಹಿಂದೆ ಕಾರ್ಯನಿರ್ವಹಿಸುತ್ತಿರುವ ಏಜೇನ್ಸಿಗಳ ಪ್ರಕಾರ ಸ್ಥಳಿಯರಿಗೆ ಟೋಲ್ ಫ್ರೀ ಮಾಡಿ ಬಿಡಬೇಕು. ನಾವು ಮನವಿ ನೀಡಿದ 15 ದಿನದ ಒಳಗೆ ಏಜೇನ್ಸಿಯವರು ಒಂದು ಸಭೆ ಕರೆದು, ಇದರ ಬಗ್ಗೆ ಚರ್ಚಿಸಬೇಕು. ಇಲ್ಲದೇ ಹೊದಲ್ಲಿ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ನೀವು ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸುವವರೆಗೂ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಹಂಸಭಾವಿ ಹೋಬಳಿ ಘಟಕದ ಅಧ್ಯಕ್ಷ ನಾಗರಾಜ ವಾಲ್ಮೀಕಿ, ಉಪಾಧ್ಯಕ್ಷ ಕಾಂತೇಶ್ ಕೋಟಿಹಾಳ, ಯೋಗೇಶ್ ಕೋಟಿಹಾಳ್, ಪರಶುರಾಮ ಕೋಟೆಯವರ, ಸಾಧಿಕ, ಆನಂದ್ ಬಂಡಿವಡ್ಡರ್, ಸುರೇಶ್ ಕೋಟಿಹಾಳ, ಬಸವರಾಜ್ ಚಕ್ರಸಾಲಿ, ಸುಭಾಸ್, ಸಿಕಂದರ್ ಮೈಸೂರು, ಸುಹಿಲ್, ಬಿ. ಎಚ್ ಬನಕಾರ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X