“ವಿಜಯಪುರ ಜಿಲ್ಲೆಯು ಒಮ್ಮೆ ಅತಿವೃಷ್ಟಿಗೆ ಮಗದೊಮ್ಮೆ ಅನಾವೃಷ್ಟಿಗೆ ತುತ್ತಾಗುವ, ಕೆಲವೊಮ್ಮೆ ಬರಗಾಲಕ್ಕೆ ಬಲಿಯಾಗುವ ಜಿಲ್ಲೆ ಹೆಸರಿಗೆ ಪಂಚನದಿಗಳ ಬೀಡಾದರೂ ಜನರ ಬದುಕು ಹಸಿರಾಗಲೇ ಇಲ್ಲ. ಕಿತ್ತು ತಿನ್ನುವ ಬಡತನ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಇಲ್ಲಿನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೂಡಲೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು” ಎಂದು ಸಾಮಾಜಿಕ ಹೋರಾಟಗಾರ ಅಭಿಲಾಷ್ ಏನ್ ಹುರುಳಿಕೊಪ್ಪ ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸೊರಬ ಪಟ್ಟಣದಲ್ಲಿ ಮಾತನಾಡಿದ ಅವರು, ಅಲ್ಲಿಯ ಜನರ ಆರೋಗ್ಯ ಪರಿಸ್ಥಿತಿಯು ಗುಣಮಟ್ಟವನ್ನು ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಯು ರೋಗಿಗಳ ಸಂಖ್ಯೆಯಿಂದ ತುಂಬಿರುತ್ತದೆ. ಹಾಗಾಗಿ ವಿಜಯಪುರ ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬುವುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದೆ” ಎಂದರು.
ಎಲ್ಲ ಅನುಕೂಲತೆ ಗಮನಿಸಿ ಮೆಡಿಕಲ್ ಕೌನ್ಸಿಲ್ ಆಪ್ ಇಂಡಿಯಾ ನಿಯೋಗ ವಿಜಯಪುರಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಶಿಪಾರಸ್ಸು ಮಾಡಿತ್ತು. ಹಾಗಾಗಿ ಜಿಲ್ಲೆಯ ಜನರ ಹೋರಾಟ ಸರಕಾರವು ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಲು ತಾತ್ವಿಕವಾಗಿ ಒಪ್ಪಿಕೊಂಡಿದೆ. ಇದು ಸಂತಸದ ಸಂಗತಿ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸೋಲು-ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ: ಡಿಸಿ ಶ್ರೀಧರ್
ಆದರೆ ದು:ಖಕರ ಸಂಗತಿ ಏನೆಂದರೆ ಇದೇ ಸರಕಾರವು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರ. ಜಿಲ್ಲೆಯ ಶಾಸಕರೊಬ್ಬರು 500 ಕೋಟಿ ಬಂಡವಾಳ ಹೂಡುವುದಾಗಿ ಸದನದಲ್ಲೇ ಹೇಳಿದ್ದಾರೆ. ಅವರಿಗೆ ಖಾಸಗಿ ಕಾಲೇಜು ಬೇಕೆನಿಸಿದರೆ ನಾಲ್ಕಾರು ಖಾಸಗಿ ಕಾಲೇಜುಗಳನ್ನು ಆರಂಭಿಸಲಿ, ಆದರೆ ಪಿಪಿಪಿ ಹೆಸರಲ್ಲಿ ಸರಕಾರಿ ಕಾಲೇಜನ್ನು ಅಪಹರಿಸುವುದನ್ನು ಇಡೀ ಜಿಲ್ಲೆಯ ಜನತೆ ತೀವ್ರವಾಗಿ ಖಂಡಿಸುತ್ತದೆ. ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ” ಎಂದು ಆಗ್ರಹಿಸಿದರು.