ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸಂಪಳ್ಳಿಯಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಸ್ಪರ್ಶವಾಗಿ ಗಿರೀಶ್ ಎಂಬವರಿಗೆ ಹಸುಗಳು ಮೃತಪಟ್ಟಿವೆ.
ಮನೆಯ ಸಮೀಪದ ಬ್ಯಾಣದಲ್ಲಿ ಹಸುವನ್ನು ಮೇಯುತ್ತಿದ್ದ ಹೊಡೆದುಕೊಂಡು ಬರಲುಹೋಗಿದ್ದ ಸಂದರ್ಭದಲ್ಲಿ ಮೂರು ಹಸುಗಳು ವಿದ್ಯುತ್ ಕಂಬದ ಸಮೀಪ ಬರುತ್ತಿದ್ದಂತೆ ಗೌಂಡಿಂಗ್ ಆಗಿದೆ.
ವಿದ್ಯುತ್ ಶಾಕ್‌ನಿಂದ ಒದ್ದಾಡಿ ಎರಡು ಹಸುಗಳು ಪ್ರಾಣಬಿಟ್ಟಿದ್ದು, ಒಂದು ಹಸು ಪ್ರಾಣಾಪಾಯದಿಂದ ಪಾರಾಗಿದೆ.
ಇದನ್ನು ಕಂಡ ಪ್ರಿಯಾಂಕ್ ಎನ್ನುವವರು ಆಘಾತಕ್ಕೆ ಒಳಗಾಗಿ ಮೂರ್ಛೆ ಹೋಗಿದ್ದಾರೆ. ತಕ್ಷಣವೇ ಅವರನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಹಸುಗಳ ಮೌಲ್ಯ ಅಂದಾಜು 1.30 ಸಾವಿರ ಎನ್ನಲಾಗಿದೆ. ಈ ಕುರಿತು ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.