ಕುಮಾರಸ್ವಾಮಿ ಮಠಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನಲ್ಲಿ ಶುಕ್ರವಾರ ನಡೆದಿದೆ.
ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಶಾಲಾ ಕಾಲೇಜು ಹಾನಗಲ್ ಕುಮಾರೇಶ್ವರ ಮಠ ಸುತ್ತ ಮುತ್ತ ಬಾಂಬ್ ಇಡಲಾಗಿದೆ. ಸದ್ಯದಲ್ಲೇ ಸ್ಫೋಟವಾಗಲಿದೆ’ ಎಂದು ಹೇಳಿದ್ದರು.
ಕರೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಹಾಯವಾಣಿ ಸಿಬ್ಬಂದಿ, ಜಿಲ್ಲಾ ಪೊಲೀಸ್ ಎಸ್‌ಪಿ ಹಾಗೂ ಹಾನಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ, ಪೊಲೀಸರು ಮಠಕ್ಕೆ ತೆರಳಿ ತಪಾಸಣೆ ಆರಂಭಿಸಿದರು.
ಮಠದ ಪ್ರತಿಯೊಂದು ಸ್ಥಳದಲ್ಲಿಯೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗಲಿಲ್ಲ. ಬಳಿಕವೇ, ಇದೊಂದು ಹುಸಿ ಕರೆಯೆಂದು ಘೋಷಿಸಿದರು.
ಹಾನಗಲ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.