ಆನೆ ತುಳಿತಕ್ಕೊಳಗಾಗಿ ಮೃತನಾದ ಕೇರಳದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ ನೀಡಿದ್ದೀರಿ, ವಯನಾಡಿನ ದುರಂತಕ್ಕೆ ಮಿಡಿದ ನೀವು 10 ಕೋಟಿ ಅನುದಾನ ಘೋಷಿಸಿದ್ದೀರಿ, ಕೇರಳದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ನೆರೆ ಪರಿಹಾರವಾಗಿ 5 ಕೋಟಿ ಪರಿಹಾರ ಘೋಷಣೆ ಮಾಡಿದ್ದೀರಿ. ಆದರೆ ಹಾಸನದಲ್ಲಿ ಗಣೇಶೋತ್ಸವ ದುರಂತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರವೇ ಎಂದು ಜೆಡಿಎಸ್ ಪ್ರಶ್ನಿಸಿದೆ.
“ಹಾಸನದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಬಹುತೇಕ ಯುವಕರು, ಬಡ ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳು. ಮನೆಗೆಲಸ ಕೂಲಿ ಮಾಡಿ ಪೋಷಕರು ಮಕ್ಕಳನ್ನು ಕಾಲೇಜಿಗೆ ಸೇರಿಸಿದ್ದರು. ಮುಂದೆ ತಂದೆತಾಯಿಯನ್ನು ನೋಡಿಕೊಳ್ಳಬೇಕಿದ್ದ, ಅವರಿಗೆ ಆಸರೆಯಾಗಬೇಕಿದ್ದ ಮಕ್ಕಳ ಜೀವವೇ ಹೋಗಿದೆ. ರಾಜ್ಯ ಸರ್ಕಾರ ಘೋಷಿಸಿರುವ 5 ಲಕ್ಷ ಪರಿಹಾರ ಏನೇನು ಸಾಲದು” ಎಂದು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದೆ.
