ಕೋಲಾರ : ಸೀರತ್ ಅಭಿಯಾನ ಸಮಿತಿ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಕೋಲಾರ ಸಮಿತಿ ವತಿಯಿಂದ ಇಂದು ನಗರದ ಸ್ಕೌಟ್ಸ್ ಭವನದಲ್ಲಿ ಸೀರತ್ ಅಭಿಯಾನ ಪ್ರಯುಕ್ತ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ನಡೆಯಿತು.
ಪ್ರವಾದಿ ಮುಹಮ್ಮದ್ ಪೈಗಂಬರ್ ಜೀವನ ಚರಿತ್ರೆಯನ್ನು ನಾವು ಅಳವಡಿಸಿಕೊಳ್ಳಬೇಕು. ಪವಿತ್ರ ಕುರಾನ್ ನಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ, ಪ್ರವಾದಿ ಮುಹಮ್ಮದ್ ರವರು ಎಲ್ಲರಿಗೂ ಶಾಂತಿ, ಸತ್ಯ, ನ್ಯಾಯದ ಪರಿಕಲ್ಪನೆಯನ್ನು ತಿಳಿಸಿದರು.
ನ್ಯಾಯದ ಪಾಲನೆ ನಮ್ಮಲ್ಲಿ ಬಂದ್ರೆ ಸಮಾಜದಲ್ಲಿ ಶಾಂತಿ ನಿರ್ಮಾಣವಾಗುತ್ತೆ, ಅಪರಾಧ ಹಾಗೂ ಭ್ರಷ್ಟಾಚಾರವು ಕಡಿಮೆಯಾಗುತ್ತೆ, ನ್ಯಾಯದ ಅಗತ್ಯತೆ ಸಾಮಾಜಕ್ಕೆ ಬಳಹ ಅಗತ್ಯವಿದ್ದು, ಮನೆಯಿಂದಲೇ ಮಕ್ಕಳಿಗೆ ನ್ಯಾಯದ ಅರಿವು ಷೋಷಕರು ಮೂಡಿಸಬೇಕಾಗುತ್ತದೆ.
ಮಹಿಳೆಯರಿಗೆ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ಸ್ಥಾನಮಾನ ಇರಲಿಲ್ಲ, ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಡುತ್ತಿದ್ದರು ಆದರೆ ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ತಡೆಗಟ್ಟಿ ಸಮಾನವಾದ ಅವಕಾಶ ಕಲ್ಪಿಸಿಕೊಟ್ಟರು.
ತಂದೆ ತಾಯಿ ಜೊತೆ ನಮ್ರತೆ, ಪ್ರೀತಿಯಿಂದ ವರ್ತಿಸಬೇಕು, ಅವರ ಕೆಲಸಗಳಲ್ಲಿ ಸಹಾಯ ಮಾಡ್ಬೇಕು,ನಿಮ್ಮ ತಂದೆ ತಾಯಿಯಿಂದಲೇ ಸ್ವರ್ಗ ಸಿಗುತ್ತೆ, ಎಂದು ಪ್ರವಾದಿಯವರು ಹೇಳುತ್ತಾರೆ.
ಎರಡು ಗುಂಪುಗಳ ನಡುವೆ ಸಂಘರ್ಷ ಇದ್ರೆ ನ್ಯಾಯದ ಆಧಾರದ ಮೇಲೆ ಶಾಂತಿಯ ಸಂಧಾನ ಮಾಡಬೇಕು. ಮನುಷ್ಯರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು, ವ್ಯವಹಾರದಲ್ಲಿ ಪ್ರಾಮಾಣಿಕವಾಗಿಬೇಕು. ಯಾರ ಹಕ್ಕನ್ನು ಹೊಡೆಯಬಾರದು, ಮೋಸ ಮಾಡಬಾರದು. ದ್ವೇಶದ ಮಾರ್ಗ ನ್ಯಾಯದಲ್ಲಿ ಅಡ್ಡ ಬರಬಾರದು.ಪ್ರವಾದಿಯವರು ಸರಿಗೆ ಸರಿ ತಪ್ಪಿಗೆ ತಪ್ಪು ಅಂತ ತೀರ್ಪು ಕೊಡುತ್ತಿದ್ದರು. ಅವರ ಜೀವನ ಚರಿತ್ರೆ ನಾವು ರೂಡಿಸಿಕೊಳ್ಳಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ ಬೆಂಗಳೂರು ಸಲಹಾ ಸಮಿತಿ ಸದಸ್ಯರಾದ ಡಾ. ಮಸೂದ್ ಶರೀಫ್ ತಿಳಿಸಿದರು.
ಶ್ರೀ ಶ್ರೀ ಸ್ವಾಮಿ ದತ್ತಪಾದನಂದ ಆಚಾರ್ಯರು ಮಾತನಾಡಿ ಮನುಷರು ಎಲ್ಲರೂ ಒಂದೇ, ಎಲ್ಲರ ರಕ್ತವು ಸಹ ಒಂದೇ ತರ ಇರುತ್ತೆ, ಎಲ್ಲಾ ಧರ್ಮದ ಗ್ರಂಥಗಳು ಜೀವನ ಯಾವ ರೀತಿ ಮಾಡಬೇಕು ಎಂದು ತಿಳಿಸುತ್ತದೆ, ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ಶೈಲಿಯಲ್ಲಿ ನಾವು ಅಳವಡಿಸಿಕೊಳ್ಳಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅನ್ವರ್ ಪಾಷ ಮಾತನಾಡಿ ಸುಮಾರು ವರ್ಷಗಳಿಂದ ಹಿಂದೆ ಪ್ರವಾದಿಗಳು, ದಾರ್ಶನಿಕರು, ಮಹಾ ಪುರುಷರು ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು. ಬೇರೆ ಸಮಾಜದ ಜೊತೆ ಜಗಳ ಮಾಡುವ ಕೆಲಸ ಯಾರು ಕೊಡಲಿಲ್ಲ ಎಲ್ಲರ ಉದ್ದೇಶ ಆರೋಗ್ಯಕರವಾದ ಸಮಾಜ ಇರಬೇಕು ಎಂದು ಆದರೆ ಇವತ್ತು ದೇಶದಲ್ಲಿ ಯಾರು ದ್ವೇಷ ಭಾಷಣ ಮಾಡ್ತಾರೆ ಅವರಿಗೆ ಹಿರೋ ತರ ಬಿಂಬಿಸುತ್ತಾರೆ. 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ ರವರು ಸೌದಿ ಅರೇಬಿಯಾದಲ್ಲಿ ಜನ್ಮ ತಾಳಿದರು.ಆ ಸಮಯದಲ್ಲೂ ಸಮಾಜ ಒಳ್ಳಯರೀತಿ ಇರಲಿಲ್ಲ, ಬಹಳ ಕೆಟ್ಟ ಕೆಲಸ ಇತ್ತು, ಆಗ ಪ್ರವಾದಿ ಮುಹಮ್ಮದ್ ರವರು ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು, ಜನರ ಜೀವನವನ್ನು ಸುಧಾರಣೆ ತಂದರು, ಶಾಂತಿ, ನ್ಯಾಯ ಸತ್ಯದ ಪರಿಕಲ್ಪನೆ ನೀಡಿದರು. ಇಂದು ಜಗತ್ತಿನಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಜನ ಪ್ರವಾದಿ ಅವರನ್ನು ಅನುಸರಿಸುತ್ತಿದ್ದಾರೆ.
ಜಮಾತೆ ಇಸ್ಲಾಮಿ ಹಿಂದ್ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ಚರಿತ್ರೆ ಅವರು ಮಾಡಿದ ಸಮಾಜ ಸುಧಾರಣೆಯ ಕ್ರಮಗಳನ್ನು ಜನರಿಗೆ ಹಾಗೂ ಎಲ್ಲಾ ಸಮಾಜದವರಿಗೆ ಅರಿವು ಮೂಡಿಸಿ ತಪ್ಪು ಕಲ್ಪನೆ ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ದರೋಡೆ ಮಾಡಲು ಹಾಗೂ ಸಮಾಜಘಾತಕ ಕೃತ್ಯಗಳನ್ನು ಎಸಗಲು ಹೊಂಚು ಹಾಕುತ್ತಿದ್ದ ತಂಡ ಅಂದರ್
ಈ ಸಂದರ್ಭದಲ್ಲಿ ಕೋಲಾರ ನಗರಸಭೆ ಅಧ್ಯಕ್ಷರಾದ ಲಕ್ಷ್ಮೀ ದೇವಮ್ಮ, ಹಿರಿಯ ಮುಖಂಡ ರಾದ ಮುನಿಯಪ್ಪ, ಶಾಂತಕುಮಾರ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ರುಹುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್ ಪಾಷ, ಹಿರಿಯ ಮುಖಂಡರಾದ ಸಲಾವುದ್ದೀನ್ ಬಾಬು, ನಗರಸಭೆ ಸದಸ್ಯ ಅಂಬರೀಷ್ ಹಲವಾರು ಸಂಘಟನೆಗಳ ಮುಖಂಡರು,ಅನ್ಸರ್, ಅಜ್ಮಲ್, ನಫೀಜ್ ಮುಂತಾದವರು ಉಪಸ್ಥಿತರಿದ್ದರು.