ಧಾರವಾಡ | ಸೈಬರ್ ವಂಚಕರ ಜಾಲಕ್ಕೆ ಗುರಿಯಾಗದಿರಿ: ಪ್ರಸನ್ನ ಕುಲಕರ್ಣಿ

Date:

Advertisements

ಮಾನವ ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ಫಲವಾಗಿ ರೂಪಿತವಾದ ಸೈಬರ್‌ ವೇದಿಕೆಯನ್ನು ಧನಾತ್ಮಕವಾಗಿ ಬಳಸದೆ, ಋಣಾತ್ಮಕವಾಗಿ ಬಳಸುವುದರ ಫಲವಾಗಿ ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ತ್ವರಿತ ಆನ್‌ಲೈನ್‌ ಸಾಲ, ಡಿಜಿಟಲ್ ಅರೆಸ್ಟ್‌ಗಳಂತಹ ವಿವಿಧ ರೂಪಗಳನ್ನು ಹೊಂದಿರುತ್ತದೆ. ಎಂದಿಗೂ ಸೈಬರ್ ವಂಚಕರ ಜಾಲಕ್ಕೆ ಬಲಿಯಾಗದಿರಿ ಎಂದು ಪ್ರಸನ್ನ ಕುಲಕರ್ಣಿ ಅಭಿಪ್ರಾಯಪಟ್ಟರು.

ಧಾರವಾಡ ನಗರದ ಅಂಜುಮನ್ ಕಾಲೇಜಿನಲ್ಲಿ ನಡೆದ ‘ಆನ್‌ಲೈನ್‌ ವಂಚನೆ ಮತ್ತು ಆರ್ಥಿಕ ಸಾಕ್ಷರತೆ’ ಜಾಗೃತ ಕಾರ್ಯಕ್ರಮದಲ್ಲಿ‌ ಮಾತನಾಡಿದರು.

“ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ಖಾತೆ ಕುರಿತು ವಿವರವಾದ ಮಾಹಿತಿಯನ್ನು ಕೊಡಬಾರದು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೃತಕ ಬುದ್ಧಿಮತ್ತೆಯನ್ನು ಹಿತಮಿತವಾಗಿ ಬಳಸಬೇಕು” ಎಂದು ‘ಕುಂದು ಕೊರತೆ ನಿವಾರಣಾ ಕೋಶ’ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಐ ಎ ಮುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪ್ರಸ್ತುತ ಮೊಬೈಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಕ್ರೈಂ’ಗಳು ರಕ್ತ ಬಿಜಾಸುರನಂತಾಗಿವೆ. ಇದಕ್ಕೆ ಬುದ್ದಿವಂತರು, ಸುಶಿಕ್ಷಿತರೇ ಬಲಿಯಾಗುತ್ತಿದ್ದಾರೆ. ಆದ್ಧರಿಂದ ಮೊಬೈಲ್ ಬಳಕೆ ಹಿತಮಿತವಾಗಿರಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಪ್ರವಾದಿ ಮುಹಮ್ಮದ್; ನ್ಯಾಯ, ಕರುಣೆಯ ಸಂದೇಶ: ಜೇಬ್ರಾನ್ ಖಾನ್

ಪ್ರಶಾಂತ್ ಮಟಗಿ ʼಸೈಬರ್ ಕ್ರೈಂ’ನ ಪ್ರಮುಖ ಅಂಶಗಳನ್ನು ಸುಶಿಕ್ಷಿತ, ಬುದ್ಧಿವಂತ ಜನರಿಂದ ಉಂಟಾಗುವ ಅಪರಾಧಗಳ ಕುರಿತು ವಿವರಿಸಿದರು.

ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಆಸ್ಮಾನಾಸ್ ಬಳ್ಳಾರಿ, ಐಕ್ಯೂ ಎಸಿ ಸಂಯೋಜಕ ಡಾ. ಎನ್ ಬಿ ನಾಲತವಾಡ ವೇದಿಕೆಯಲ್ಲಿದ್ದರು. ಸಬಿಹಾ ಖಾಜಿ ಕುರಾನ್ ಪಠಿಸಿದರು. ಕು.ಆಕಾಂಕ್ಷ ಶ್ಲೋಕ ಪಠಿಸಿದರು. ಕುಂದು-ಕೊರತೆ ನಿವಾರಣಾ ಕೋಶದ ಅಧ್ಯಕ್ಷ ಡಾ. ಆಸ್ಮಾ ಅಂಜುಮ ನದಾಫ್ ಸ್ವಾಗತಿಸಿ, ನಿರೂಪಿಸಿದರು. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷ ಡಾ. ಸೌಭಾಗ್ಯ ಜಾಧವ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

Download Eedina App Android / iOS

X