ಕೋಲಾರ : ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಗುರಿ ಸಾಧನೆಯ ಹಿತದೃಷ್ಟಿಯಿಂದ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಕೋಲಾರ ಜಿಲ್ಲಾ ಘಟಕದ ಸಾಮಾನ್ಯ ಸಭೆ ಭಾನುವಾರ ನಗರದ ಅಲ್ ಅಮೀನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆ ಹಾಗೂ ನಿಗಮ/ನಿಯಮಿತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮುಸ್ಲಿಂ ಸಮುದಾಯದ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.ಸಮುದಾಯದ ಶಿಕ್ಷಣ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಬಲಿಕರಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿ, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕೃತ ಘೋಷಣೆ ಮಾಡಿ, ಹೊಸ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿ, ಸರ್ಕಾರಿ ಹುದ್ದೆಗಳಲ್ಲಿ ನೌಕರರ ಸಬಲೀಕರಣ, ಯುವಕರಿಗೆ ಶಿಕ್ಷಣ-ಉದ್ಯೋಗಾವಕಾಶ ವಿಸ್ತರಣೆ ಮತ್ತು ಮಹಿಳಾ ಸಬಲೀಕರಣದ ಕುರಿತು ತೀವ್ರ ಚರ್ಚೆ ನಡೆಯಿತು. ಈ ಕಾರ್ಯಸಾಧನೆಗಾಗಿ ಜಿಲ್ಲಾ ಮಟ್ಟದ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ನೆರವೇರಿಸಲಾಯಿತು.
ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಹೀಗಿದೆ:
ಜಿಲ್ಲಾಧ್ಯಕ್ಷೆ: ಶಿರೀನ್ ತಾಜ್ (ಜಿಲ್ಲಾ ವ್ಯವಸ್ಥಾಪಕಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ)
ಗೌರವಾಧ್ಯಕ್ಷ: ಅಬ್ದುಲ್ ನವೀದ್ ಎ. (ಪ್ರಾಂಶುಪಾಲ, ದೇವರಾಯ ಸಮುದ್ರ ಮುರಾರ್ಜಿ ದೇಸಾಯಿ ವಸತಿ ಶಾಲೆ)
ಕಾರ್ಯಾಧ್ಯಕ್ಷ: ಅಸ್ಗರ್ (ಪ್ರೌಢಶಾಲಾ ಶಿಕ್ಷಕರು)
ಹಿರಿಯ ಉಪಾಧ್ಯಕ್ಷ: ಅಯಾಜ್ (ಮುಖ್ಯೋಪಾಧ್ಯರು, ಸ.ಕಿ.ಪ್ರಾ. ಶಾಲೆ)
ಕಾರ್ಯದರ್ಶಿ: ಮುಜೀಬ್ (ವಿಜ್ಞಾನ ಶಿಕ್ಷಕರು, ತಾಯಲೂರು ಸರ್ಕಾರಿ ಪ್ರೌಢಶಾಲೆ)
ಉಪಾಧ್ಯಕ್ಷರು: ಡಾ. ಶಗುಫ್ತ ತಬಸ್ಸಮ್ (ತಜ್ಞ ವೈದ್ಯರು, ಮಾಲೂರು ಸಾರ್ವಜನಿಕ ಆಸ್ಪತ್ರೆ), ನಯಾಜ್ ಅಹಮದ್ ಬೇಗ್
ಖಜಾಂಚಿ: ಸೈಯದ್ ಆಸಿಫ್ ಅಹಮದ್ (ಉಪನ್ಯಾಸಕರು, ಅಲಮೀನ್ ಅನುದಾನಿತ ಕಾಲೇಜು)
ಜಂಟಿ ಕಾರ್ಯದರ್ಶಿಗಳು: ಜಮೀಲ್ ಅಹಮದ್ (ಸಿ.ಆರ್.ಪಿ), ಏಜಾಜ್ ಪಾಷ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ)
ಸಂಘಟನಾ ಕಾರ್ಯದರ್ಶಿಗಳು: ಖಾಸಿಂ ಅಲಿ (ಗ್ರಾಮ ಆಡಳಿತ ಅಧಿಕಾರಿ), ರಿಹಾನ ಬಾನು (ಮುಖ್ಯೋಪಾಧ್ಯರು, ಪ್ರೌಢಶಾಲೆ)
ಮಾಧ್ಯಮ ಕಾರ್ಯದರ್ಶಿ: ನಬಿ ಸಾಬ್ (ಗ್ರಾಮ ಆಡಳಿತ ಅಧಿಕಾರಿ), ಮೊಹಮ್ಮದ್ ಅಲಿ (ಔಷಧಗಾರ, ಶ್ರೀನಿವಾಸಪುರ) – ಕಾರ್ಯಕಾರಿ ಸಮಿತಿ ಸದಸ್ಯ , ಸಯ್ಯದ್ ಅಮ್ಜದ್ ಪಾಷಾ (ತಾಂತ್ರಿಕ ಅಧಿಕಾರಿ, KOMUL, ಶ್ರೀನಿವಾಸಪುರ) – ಕಾರ್ಯಕಾರಿ ಸಮಿತಿ ಸದಸ್ಯ .
ಇದನ್ನು ಓದಿದ್ದೀರಾ..? ಸೀರತ್ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಸಮಾವೇಶ
ಸಭೆಯಲ್ಲಿ ಬೆಂಗಳೂರಿನ ರಾಜ್ಯ ಸಂಘದ ಪ್ರಮುಖರಾದ ಡಾ. ಮಹಮ್ಮದ್ ಇಸ್ಮಾಯಿಲ್, ಸೈಯದ್ ಸಾಜಿದ್ ಹುಸೇನ್, ಇಶಾಕ್ ಅಹಮದ್, ಮಹಮ್ಮದ್ ಹುಸೇನ್ ಮುಜಾವರ್ ಹಾಗೂ ಯೂಸುಫ್ ಅಸ್ಲಾಂ ಉಪಸ್ಥಿತರಿದ್ದರು. ಇವರು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕೃತ ಘೋಷಣೆ ಮಾಡಿ, ಹೊಸ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿ, ಸರ್ಕಾರಿ ಹುದ್ದೆಗಳಲ್ಲಿ ನೌಕರರ ಸಬಲೀಕರಣ, ಯುವಕರಿಗೆ ಶಿಕ್ಷಣ-ಉದ್ಯೋಗಾವಕಾಶ ವಿಸ್ತರಣೆ ಮತ್ತು ಮಹಿಳಾ ಸಬಲೀಕರಣದ ಕುರಿತು ತೀವ್ರ ಚರ್ಚೆ ನಡೆಯಿತು.