ಬಾಗೇಪಲ್ಲಿ:-ಆಸ್ಪತ್ರೆ ತ್ಯಾಜ್ಯ ವಿಲೇವಾರಿಗೆ ಸರಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಪಟ್ಟಣದ ಕೆಲ ಆಸ್ಪತ್ರೆಗಳು ಬೇಕಾಬಿಟ್ಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಕಂಡುಬಂದಿದೆ.ಆಸ್ಪತ್ರೆಗಳಲ್ಲಿ ಬಳಸಿ ಸಿರೆಂಜ್, ಗಾಯಗಳಿಗೆ ಸುತ್ತಿದ್ದ ರಕ್ತದ ಬಟ್ಟೆ, ನಿರುಪಯುಕ್ತ ಔಷಧ ಬಾಟಲಿಗಳು ಸೇರಿದಂತೆ ಹಲವು ತ್ಯಾಜ್ಯಗಳನ್ನು ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಕಾನೂನು ಬಾಹಿರವಾಗಿ ಎಸೆಯಲಾಗಿದೆ.
ತಾಲೂಕಿನ ಚಿನ್ನೇಪಲ್ಲಿ ಕ್ರಾಸ್ ಸಮೀಪ ರಸ್ತೆ ಬದಿಯಲ್ಲೇ ಪ್ಲಾಸ್ಟಿಕ್ ಕವರ್ ಗಳಲ್ಲಿ ಗಂಟು ಕಟ್ಟಿಕೊಂಡು ಬಂದು,ಎಸೆಯಲಾಗಿದೆ. ಇದರಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದು,ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ್ ಪ್ರತಿಕ್ರಿಯೆ ನೀಡಿನಾನು ನಿತ್ಯವೂ ನಮ್ಮ ಫೌಲ್ಟ್ರೀ ಫಾರ್ಮ್ ಕಡೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿರುತ್ತೇನೆ. ಎಂದೂ ಈ ರೀತಿ ಆಸ್ಪತ್ರೆ ತ್ಯಾಜ್ಯ ಕಂಡಿರಲಿಲ್ಲ.ಹಾಗಾಗಿ ಇದನ್ನು ಯಾರು ಎಸೆದಿದ್ದಾರೆ ಖಾಸಗಿ ಆಸ್ಪತ್ರೆಯವರಾ ಅಥವಾ ನಕಲಿ ಕ್ಲಿನಿಕ್ ಗಳಿಂದ ತಂದಂತಹ ತ್ಯಾಜ್ಯವೆಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಇದನ್ನು ಓದಿದ್ದೀರಾ..? ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಾಮಾನ್ಯ ಸಭೆ, ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಆಸ್ಪತ್ರೆಯ ತ್ಯಾಜ್ಯವನ್ನು ಎಲ್ಲಂದರಲ್ಲೆ ಸುರಿಯಬಾರದು,ಎಸೆಯಬಾರದು. ಅವುಗಳನ್ನು ನಿರ್ವಹಣೆ ಮಾಡಲೇ ತರಭೇತಿಗೊಳಿಸಿರುತ್ತಾರೆ.ನಿಯಮಗಳನುಸಾರವಾಗಿ ತ್ಯಾಜ್ಯ ನಿರ್ವಹಣೆ ಮಾಡೇಕಾಗಿರುತ್ತದೆ. ಆದರೆ ಇಂಥಹ ತ್ಯಾಜ್ಯವನ್ನು ನಿರ್ಲಕ್ಷ್ಯದಿಂದ ಎಸೆದಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕೃತ್ಯ ಎಸೆಗಿರುವವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.