ಧಾರವಾಡ | ಸೈಬರ್ ವಂಚಕರ ಜಾಲಕ್ಕೆ ಗುರಿಯಾಗದಿರಿ: ಪ್ರಸನ್ನ ಕುಲಕರ್ಣಿ

Date:

Advertisements

ಮಾನವ ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ಫಲವಾಗಿ ರೂಪಿತವಾದ ಸೈಬರನ್ನು ಋಣಾತ್ಮಕವಾಗಿ ಬಳಸುವುದರ ಫಲವಾಗಿ ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೈಬರ್ ವಂಚಕರ ಜಾಲಕ್ಕೆ ಸಿಲುಕದಂತೆ ಎಚ್ಚರವಹಿಸಬೇಕು ಎಂದು ಅಂಜುಮನ್ ಕಾಲೇಜಿನಲ್ಲಿ “ಕುಂದು ಕೊರತೆ ನಿವಾರಣಾ ಕೋಶ” ವತಿಯಿಂದ “ಆನ್ಲೈನ್ ವಂಚನೆ ಮತ್ತು ಆರ್ಥಿಕ ಸಾಕ್ಷರತೆ” ಜಾಗೃತ ಕಾರ್ಯಕ್ರಮದಲ್ಲಿ ಪ್ರಸನ್ನ ಕುಲಕರ್ಣಿ ಮಾತನಾಡಿ ತಿಳಿಸಿದರು.

ಯಾರೂ ಆನ್ಲೈನ್ ನಲ್ಲಿ ಬ್ಯಾಂಕಿಂಗ್ ಖಾತೆ ಕುರಿತು ವಿವರವಾದ ಮಾಹಿತಿಯನ್ನು ಕೊಡಬೇಡಿ. ಅತಿಯಾದರೆ ಅಮೃತವು ವಿಷ ಎನ್ನುವಂತೆ ಕೃತಕ ಬುದ್ಧಿಮತ್ತೆಯನ್ನು ಹಿತವಾಗಿ ಹಾಗೂ ಮಿತವಾಗಿ ಬಳಸಬೇಕು. ಸೈಬರ್ ತ್ವರಿತ ಆನ್ಲೈನ್ ಸಾಲ, ಡಿಜಿಟಲ್ ಅರೆಸ್ಟ್ ಗಳಂತಹ ವಿವಿಧ ರೂಪಗಳನ್ನು ಹೊಂದಿದೆ. ಇದನ್ನು ಧನಾತ್ಮಕವಾಗಿ ಬಳಸಬೇಕು ಎಂದರು.

ಪ್ರಶಾಂತ್ ಮಟಗಿ ಮಾತನಾಡಿ, ಸೈಬರ್ ಕ್ರೈಂ’ನ ಪ್ರಮುಖ ಅಂಶಗಳನ್ನು ಸುಶಿಕ್ಷಿತ, ಬುದ್ಧಿವಂತ ಜನರಿಂದ ಉಂಟಾಗುವ ಅಪರಾಧಗಳ ಕುರಿತು ವಿವರಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಐ. ಎ. ಮುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಸ್ತುತ ಮೊಬೈಲ್ ಯುಗವು ರಕ್ತ ಬಿಜಾಸುರನಂತೆ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಕ್ರೈಂ ಗಳಾಗಿವೆ. ಇದಕ್ಕೆ ಬುದ್ದಿವಂತರು, ಸುಶಿಕ್ಷಿತರುಗಳೇ ಬಲಿಯಾಗುತ್ತಿದ್ದಾರೆ. ಹೀಗಾಗಿ ಮೊಬೈಲ್ ಅನ್ನು ಮಿತವಾಗಿ, ಹಿತವಾಗಿ ಬಳಕೆ ಮಾಡಬೇಕು ಎಂದು ಹೇಳಿದರು.

ಈ ಸುದ್ಧಿ ಓದಿದ್ದೀರಾ? ಧಾರವಾಡ | ವನ ಸಂರಕ್ಷಣೆಯ ಹೊಣೆ ಪ್ರತಿಯೊಬ್ಬರ ಮೇಲಿದೆ: ಸಚಿವ ಈಶ್ವರ ಖಂಡ್ರೆ

ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಆಸ್ಮಾ ನಾಸ್ ಬಳ್ಳಾರಿ, ಐಕ್ಯೂ ಎಸಿ ಸಂಯೋಜಕ ಡಾ. ಏನ್.ಬಿ ನಾಲತವಾಡ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಸಬಿಹಾ ಖಾಜಿ ಕುರಾನ್ ಪಠಿಸಿದರು. ಕು.ಆಕಾಂಕ್ಷ ಶ್ಲೋಕ ಪಠಿಸಿದರು. ಕುಂದು ಕೊರತೆ ನಿವಾರಣಾ ಕೋಶದ ಅಧ್ಯಕ್ಷೆ ಡಾ. ಆಸ್ಮಾ ಅಂಜುಮ ನದಾಫ್ ಸ್ವಾಗತಿಸಿ, ಅತಿಥಿಗಳ ಪರಿಚಯಿಸಿ, ನಿರೂಪಿಸಿದರು. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷೆ ಡಾ. ಸೌಭಾಗ್ಯ ಜಾಧವ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X