ಬೀದರ್ ನಗರದ ಗಾಂಧಿ ಗಂಜ ಠಾಣೆಯ ಪೊಲೀಸರು ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು ಬಂಧಿಸಿ ₹43.47 ಲಕ್ಷ ಮೌಲ್ಯದ 43 ಕಿಲೋ 479 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಾತ್ಮೀದಾರರ ಮಾಹಿತಿ ಮೇರೆಗೆ ಡಿವೈಎಸ್ಪಿ ಶಿವನಗೌಡ ಪಾಟೀಲ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಬೀದರ್ ನಗರದ ಆಶ್ರಾ ಕಾಲೋನಿ ಸಮೀಪ ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ಕಾರಿನಿಂದ ಗಾಂಜಾ ಚೀಲ ರಸ್ತೆ ಮೇಲೆ ಬೀಸಾಡಿ ಗೂನಳ್ಳಿ ರಸ್ತೆ ಮೂಖಾಂತರ ಓಡಿ ಹೋಗಿದ್ದರು.
ಕಾರಿನ ಸಮೀಪ ನಿಂತಿದ್ದ ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ʼಬೀದರ್ ನಗರದ ಇರಾನಿ ಕಾಲೋನಿ ನಿವಾಸಿಯಾಗಿದ್ದು, ನಾನು ಕರೆ ಮಾಡಿದಾಗ ಮಧ್ಯಪ್ರದೇಶದಿಂದ ಗಾಂಜಾ ತಂದು ಕೊಡುತ್ತಾರೆ. ಹೆಚ್ಚಿನ ಹಣ ಸಂಪಾದನೆಗಾಗಿ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತೇನೆʼ ಎಂದು ತಪ್ಪೊಪ್ಪಿಕೊಂಡಿದ್ದಾಳೆ.
ʼಮಧ್ಯಪ್ರದೇಶ ಮೂಲದಿಂದ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ತಂದು ಕೊಟ್ಟು ಪರಾರಿಯಾದ ರೇವಾ, ಕಿರು ಹಾಗೂ ರಾಹುಲ್ ಸೇರಿ ಬಂಧಿತ ಮಹಿಳೆ ಸೇರಿ ನಾಲ್ವರ ವಿರುದ್ಧ ಗಾಂಧಿ ಗಂಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಇಳಿಮುಖ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಾಂಧಿ ಗಂಜ ಠಾಣೆಯ ಎಎಸ್‌ಐ ಶಶಿಕಲಾ, ಸಿಬ್ಬಂದಿಗಳಾದ ಇರ್ಫಾನ್, ನವೀನ್, ಸಂಜುಕುಮಾರ್, ಗಂಗಾಧರ, ಸುಧಾಕರ, ಇಸ್ಮಾಯಿಲ್, ಸಂಜನಾ ಹಾಗೂ ದೀಪಕ ಹಾಗೂ ನೂತನ ನಗರ ಠಾಣೆಯ ಸಿಬ್ಬಂದಿಗಳಾದ ನಿಂಗಪ್ಪ, ಭರತ, ಸತೀಷ ಹಾಗೂ ಎಲೀಷ್ ಭಾಗವಹಿಸಿದ್ದರು.