ಹಾವೇರಿ | ಸಚಿವ ಸತೀಶ ಜಾರಕಿಹೊಳಿ ಅವರಿಂದ ಪ್ರಜಾಸಂಗ್ರಾಮ ಕೋ-ಆಪರೇಟಿವ್ ನೂತನ ಸೊಸೈಟಿ ಉದ್ಘಾಟನೆ

Date:

Advertisements

“ಕೋ-ಆಪರೇಟಿವ್ ಸೊಸೈಟಿ ತಳ ಸಮುದಾಯ ಆರ್ಥಿಕವಾಗಿ ಸದೃಢರಾಗುವುದಷ್ಟೇ ಅಲ್ಲದೇ ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುದರ ಭಾಗವಾಗಿದೆ. ನಿಮ್ಮ ಮುಂದಿನ ಮಕ್ಕಳಿಗೆ ನೇರವಾಗಲಿದೆ” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಪ್ರಜಾ ಸಂಗ್ರಾಮ ಕೋ-ಆಪರೇಟಿವ್ ನೂತನ ಸೊಸೈಟಿ ಉದ್ಘಾಟಿಸಿ ಮಾತನಾಡಿದರು.

ಹಾವೇರಿ ಪಟ್ಟಣದ ಶಿವಶಕ್ತಿ ಪ್ಯಾಲೇಸ್ನಲ್ಲಿ ಭಾರತ ಸೇವಾ ಪೋರ್ಸ್ ಕರ್ನಾಟಕ ನೇತೃತ್ವದಲ್ಲಿ ಪ್ರಜಾಸಂಗ್ರಾಮ ಕೋ-ಆಪರೇಟಿವ್ ನೂತನ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಒಬ್ಬರಿಂದ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲರಿಂದ ಸಾಧ್ಯ. ಈ ಸಮಯ ಬದಲಾವಣೆಗೆ ಸಕಾಲ. ಇಷ್ಟು ದಿನ ಬೇರೆಯವರ ಮಾತುಗಳನ್ನು ನಾವು ಕೇಳುತ್ತಿದ್ದೆವು, ಇನ್ನೂ ಮುಂದು ಬೇರೆಯವರು ನಮ್ಮಮಾತುಗಳನ್ನು ಕೇಳಬೇಕು. ಆ ರೀತಿಯಲ್ಲಿ ನಮ್ಮ ನಡೆ ನುಡಿ ಇರಬೇಕು. ಜೊತೆಗೆ ಡಾ. ಬಿ. ಆರ್. ಅಂಬೇಡ್ಕರ್, ಬಸವಣ್ಣನವರ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದರು.

“ಸೊಸೈಟಿ ಕಟ್ಟಲು ಬಹಳ ಪ್ರಾಮಾಣಿಕ ಇರಬೇಕು. ನಿಷ್ಠಾವಂತರಾಗಿ ಸೇವೆ ಸಲ್ಲಿಸಿದಾಗ ಮಾತ್ರ ಯಶಸ್ವಿಯಗಲು ಸಾಧ್ಯ. ಎಲ್ಲರೂ ನಿಮ್ಮ ಉಳಿತಾಯದ ಹಣವನ್ನು ಸೊಸೈಟಿಯಲ್ಲಿ ಇಡಬೇಕು. ಈ ಮೂಲಕ ಎಲ್ಲರೂ ಆರ್ಥಿಕವಾಗಿ ಬೆಳೆಯಬೇಕು” ಎಂದರು.

ಪ್ರಜಾಸಂಗ್ರಾಮ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರು ಏಳುಕೋಟೆಪ್ಪ ಪಾಟೀಲ್ ಪ್ರಸ್ತಾವಿಕ ಮಾತನಾಡಿ, “ಮಾತೃ ಭೂಮಿಯ ಋಣವನ್ನು ತೀರಿಸಲು, ಭಾರತ್ ಸೇವಾ ಪೋರ್ಸ್ ಮೂಲಕ ಕೆಲಸ ಮಾಡುತ್ತಾ ಬಂದಿದ್ದೇವೆ. ಸತೀಶ್ ಜಾರಕಿಹೊಳಿ ಅವರು ಪ್ರೋತ್ಸಾಹ ಸಾಕಷ್ಟು ಇದೆ. ಅವರ ಆಶಯದಂತೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯುವಲ್ಲಿ ನಮ್ಮ ಸೊಸೈಟಿ ಮುಂದುವರಿಯಲಿದೆ” ಎಂದರು.

ಬಸವರಾಜ್ ಶಿವಣ್ಣನವರ ಸೊಸೈಟಿಯ ಲೋಗೋ ಬಿಡುಗಡೆ ಗೊಳಿಸಿ ಮಾತನಾಡಿದರು,”ತಳ ಸಮುದಾಯದವರು ಸಮಾಜದಲ್ಲಿ ಕಷ್ಟ, ಸಮಸ್ಯೆಗಳನ್ನು ಅನುಭವಿಸಿಕೊಂಡು ಬಂದವರು. ಅದರಲ್ಲೂ ಮೂಢನಂಬಿಕೆ ಹೆಚ್ಚು ಹೊಂದಿದವರು.ಅದನ್ನು ಹೋಗಲಾಡಿಸಲು ಸತೀಶ್ ಜಾರಕಿಹೊಳಿ ಹೋಳಿ ಅವರು ಮಾನವ ಬಂಧುತ್ವ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಸಮಾಜವನ್ನು ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಲು ಈ ಸಂಸ್ಥೆ ಮಾಡಲಿ. ಮಹಿಳೆಯರು ಆರ್ಥಿಕ ಸ್ವವಲಂಬಿಯಾಗಿ ಬೆಳೆಯಲು ಈ ಸಂಸ್ಥೆ ಹುಟ್ಟಿಕೊಂಡಿದೆ” ಎಂದರು.

ವೇದಿಕೆಯಲ್ಲಿ ಪರಮಪೂಜ್ಯ ಡಾ. ಸಿದ್ದರಾಜು ಮಹಾಸ್ವಾಮಿಗಳು, ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ, ಹೆಸ್ಕಾಂ ಅಧ್ಯಕ್ಷರು ಸೈಯದ್ ಅಜ್ಜಂಪೀರ ಖಾದ್ರಿ, ಕಾಂಗ್ರೆಸ್ ಮುಖಂಡರು ಸಂಜೀವಕುಮಾರ ನೀರಲಗಿ, ರಾಮಪ್ರಸಾದ, ಹಿರಿಯ ನ್ಯಾಯವಾದಿ, ಬಸವರಾಜ ಹಾದಿಮನಿ, ಅಶೋಕ ಮರಿಯಮ್ಮನವರ, ಡಿ ವೈ ಎಫ್ ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಉಡಚಪ್ಪ ಮಾಳಗಿ, ರವಿ ಹಾದಿಮನಿ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು. ಡಾ. ಮಂಜುನಾಥ ಎಂ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

ಹುಬ್ಬಳ್ಳಿ | ಮಹಾನಗರ ಪಾಲಿಕೆ ಕಲಾಪಕ್ಕೆ 18 ಮಾರ್ಷಲ್‌ಗಳ ನೇಮಕ

ಸಾಮಾನ್ಯವಾಗಿ ವಿಧಾನಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಾರೆ. ಆ ಮಾದರಿಯಲ್ಲಿ ಇದೀಗ ಪ್ರಥಮ‌...

Download Eedina App Android / iOS

X