ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು, ವಿ ಬಾಡಗದಲ್ಲಿ ಉನ್ನತಮಟ್ಟದ ಕ್ರೀಡಾ ತರಬೇತಿ ವಸತಿ ನಿಲಯ ನಿರ್ಮಾಣ ಸ್ಥಳವನ್ನು ರಾಜ್ಯಸಭಾ ಸದಸ್ಯ ಅಜಯ್ ಮಾಕನ್ ಹಾಗೂ ಶಾಸಕರಾದ ಎ. ಎಸ್. ಪೊನ್ನಣ್ಣ ವೀಕ್ಷಣೆ ಮಾಡಿದರು.
ಶಾಸಕರಾದ ಎ. ಎಸ್. ಪೊನ್ನಣ್ಣ ಮಾತನಾಡಿ, ” ಈ ಹಿಂದೆ ಸಂಸದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಉತ್ತಮವಾದ ಕ್ರೀಡಾ ತರಬೇತಿ ವಸತಿ ನಿಲಯ ನಿರ್ಮಿಸುವ ಬಗ್ಗೆ ಮಾತನಾಡಿದ್ದೆ. ಅದಕ್ಕೆ ಅವರು ಸ್ಪಂದಿಸಿ ಕೊಡಗಿನ ಕ್ರೀಡೆ ಮತ್ತು ಸೈನ್ಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ ಖಂಡಿತವಾಗಿಯೂ ತನ್ನ ಕೈಲಾದ ಅನುದಾನವನ್ನು ಒದಗಿಸುವ ಭರವಸೆ ನೀಡಿದ್ದರು. ಅದೇ ರೀತಿ ಇಂದು ಕೊಡಗಿಗೆ ಆಗಮಿಸಿ ಉನ್ನತ ಕ್ರೀಡಾ ತರಬೇತಿ ವಸತಿ ನಿಲಯಕ್ಕೆ ಮೀಸಲಿಟ್ಟ 11.2 ಎಕರೆ ಜಾಗವನ್ನು ವೀಕ್ಷಿಸಿದರಲ್ಲದೆ, ತಮ್ಮ ಅನುದಾನದಲ್ಲಿ ನೀಡಬಹುದಾದ ಎಲ್ಲಾ ಮೊತ್ತವನ್ನು ಸದರಿ ಕ್ರೀಡಾಂಗಣಕ್ಕೆ ನೀಡುವುದಾಗಿ ಭರವಸೆ ನೀಡಿದರು”.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಳೇ ಮೈಸೂರು ಅಭಿವೃದ್ಧಿಗೆ ಸರ್. ಎಂ. ವಿಶ್ವೇಶ್ವರಯ್ಯರವರ ಕೊಡುಗೆಯಿದೆ : ಸಂದೇಶ್ ಸ್ವಾಮಿ
ಸ್ಥಳ ಭೇಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್, ಕಂದಾಯ ಅಧಿಕಾರಿ ಹರೀಶ್, ಅರಣ್ಯ ಅಧಿಕಾರಿ ಗೋಪಾಲ್, ಕಂಜಿತಂಡ ಪೂವಣ್ಣ, ಕೋಲಿರ ಬೊಪ್ಪಣ್ಣ, ಗಿಣಿ ಮೊಣ್ಣಪ್ಪ, ಕಾಶಿ ಕಾರ್ಯಪ್ಪ, ಕೊಳತಂಡ ಮಾಚಯ್ಯ, ಚೆಂದ್ರಿಮಾಡ ನಂಜಪ್ಪ , ಲೋಹಿತ್, ಅಪ್ಪಣ್ಣ , ಸಾಧಾ, ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಶಬ್ಬೀರ್, ಕುಂಡಚೀರ ಮಂಜು ದೇವಯ್ಯ, ಮಹಾದೇವ, ಮಂಜುನಾಥ್, ಗಣೇಶ, ಕಾಳಪ್ಪ, ಹ್ಯಾರೀಶ್ ಸೇರಿದಂತೆ ಇನ್ನಿತರರು ಇದ್ದರು.