ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ 9ನೇ ರಾಜ್ಯ ಸಮ್ಮೇಳನವು ಯಾದಗಿರಿಯ ಕೆಇಬಿ ನೌಕರರ ಸಭಾಭವನದಲ್ಲಿ ಜರುಗಿತು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಪರವಾಗಿ ಲಾಲ್ ಅಹಮ್ಮದ್ ಶೇಖ್ ಅವರನ್ನು ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ವಿಜಯಪುರ ಜಿಲ್ಲಾ ಸಮಿತಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ಇಂಡಿ ತಾಲೂಕಿನ ಕಪನಿಂಬರಗಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಾಲ್ ಅಹಮ್ಮದ್ ಶೇಖ್, ನೌಕರರ ಸಂಘದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಎಮ್.ಬಿ. ನಾಡಗೌಡ ಘೋಷಣೆ ಮಾಡಿ ಲಾಲ್ ಅಹಮ್ಮದ್ ಶೇಖ್ ಅವರಿಗೆ ಸಂಘದ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕೆ ಅಕ್ಕಮಹಾದೇವಿ ವಿವಿ ಕಟಿಬದ್ಧ: ಕುಲಪತಿ ವಿಜಯಾ