ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಗರ್ಭಿಣಿಗೆ ಆಸ್ಪತ್ರೆ ಎದುರೇ ಹೆರಿಗೆ ಆಗಿರುವ ಘಟನೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕಾವೇರಿ ಎನ್ನುವ ಗರ್ಭಿಣಿಗೆ ಹೆರಿಗೆ ಆಗಿದೆ. ಇದರಿಂದ ಸ್ಥಳೀಯರು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದ ಸಾಕಷ್ಟು ವೈದ್ಯಕೀಯ ಸೌಲಭ್ಯಗಳಿದ್ದರೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿಗಳೇ ನಿರ್ಲಕ್ಷ್ಯ ವಹಿಸಿದರೆ ಬಡ ರೋಗಿಗಳು, ಗರ್ಭಿಣಿಯರ ಆರೋಗ್ಯದ ಕಾಳಜಿಗೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಸರ್ಜನ್ ಅವರು, ʼಒಂದೊಂದು ಸಲ ಈ ತರಹ ಘಟನೆ ಆಗುತ್ತವೆ. ಆದರೆ, ತಾಯಿ ಹಾಗೂ ಮಗು ಸುರಕ್ಷಿತವಾಗಿ, ಆರೋಗ್ಯವಾಗಿ ಇದ್ದಾರೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಪರಿಹಾರ ನೀಡದೇ ಭೂ ಕಬಳಿಕೆ ಮಾಡಿದ ಅಧಿಕಾರಿಗಳ ವಜಾಕ್ಕೆ ರೈತರ ಆಗ್ರಹ
ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂದು ಸ್ಥಳೀಯರು, ರೋಗಿಗಳು ಆಗ್ರಹಿಸಿದ್ದಾರೆ.