ಕೊಪ್ಪಳ ಜಿಲ್ಲೆಯ ವಸತಿ ನಿಲಯಗಳ ಆಹಾರ ಪೂರೈಕೆಯಲ್ಲಿ ಕಡಿತ : ಕೆವಿಎಸ್ ಖಂಡನೆ

Date:

Advertisements

ಸರಕಾರದ ಯಾವುದೇ ಆದೇಶವಿಲ್ಲದೆ ಕಳೆದ 3 ತಿಂಗಳಿಂದ ಕೊಪ್ಪಳ ಜಿಲ್ಲೆಯ ಹಿಂದುಳಿದ ಮತ್ತು ಎಸ್ಸಿ-ಎಸ್ಟಿ ವಸತಿ ನಿಲಯಗಳಿಗೆ ಪೂರೈಸುವ ಮೆನ್ಯು ಚಾರ್ಟ್‌ನಲ್ಲಿ ಆಹಾರ ಕಡಿತಗೊಳಿಸಲಾಗಿದೆ. ಈ ಅನಧಿಕೃತ ಕ್ರಮವನ್ನು ಖಂಡಿಸಿರುವ ಕೆವಿಎಸ್‌ ಸಂಘಟನೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ವಸತಿ ನಿಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದೆ.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮುಖಂಡರು ಮಾತನಾಡಿ, “ಕೊಪ್ಪಳ ಜಿಲ್ಲೆಯ ವಸತಿ ನಿಲಯಗಳಲ್ಲಿ ಹಿಂದಿನ ಸರಕಾರದ ಈ ಹಿಂದಿನ ಮೆನ್ಯು ಚಾರ್ಟ್ ಬದಲಿಸಿ ಅಧಿಕಾರಿಗಳು ತಾವೇ ಅಹಾರದ ಮೆನ್ಯು ಚಾರ್ಟ್‌ ತಯಾರಿಸಿ ಅದರ ಪ್ರಕಾರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುತ್ತಿದ್ದಾರೆ. ಇದು ಸರಕಾರದ ಮೂಲ ನಿಯಮ ಉಲ್ಲಂಘಿಸಿದಂತಾಗಿದೆ. ಅಲ್ಲದೆ ಆಧಿಕಾರಿಗಳಿಂದ ವಿದ್ಯಾರ್ಥಿಗಳ ಮೆಲೆ ಮಾನಸಿಕ ಗದಾ ಪ್ರಹಾರದ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಅಧಿಕಾರಿಗಳು ಸರಕಾರದ ಯಾವುದೇ ಸೂಚನೆ ಇಲ್ಲದೇ ಹಳೆಯ ಮೆನ್ಯು ಚಾರ್ಟ್ ಬದಲಿಸ ಹೊಸ ಮೆನ್ಯು ಚಾರ್ಟ್ ತಂದಿರುವುದು ನಿಯಮ ಬಾಹಿರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಹಳೆ ಮೆನ್ಯುವನ್ನೇ ಮುಂದುವರಿಸಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಎಲ್ಲಾ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳಾದ ವ್ಯವಸ್ಥಿತ ಕೊಠಡಿ, ಗುಣಮಟ್ಟದ ಆಹಾರ, ನೀರಿನ ಪೂರೈಕೆ, ಆಟದ ಸಾಮಗ್ರಿಗಳು, ವ್ಯಾಯಾಮ ಕೊಠಡಿ, ಸಾಮಗ್ರಿಗಳು, ಗ್ರಂಥಾಲಯ, ಸ್ಪರ್ಧಾತ್ಮಕ ಹಾಗೂ ಪಠ್ಯಾಧರಿತ ಪುಸ್ತಕಗಳನ್ನು ನೀಡುಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕೊಪ್ಪಳ | ನಗರಸಭೆ ಅಧ್ಯಕ್ಷರ ಸಹೋದರ & ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವೃತ್ತಿಪರ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ವಿದ್ಯಾರ್ಥಿಗಳಿಗೆ ಕೊಡಮಾಡುವ ಆಹಾರ ಭತ್ಯೆಯನ್ನು 1650 ರೂ.ಗಳಿಂದ 3250 ರೂಪಾಯಿಗಳವರೆಗೆ ಹೆಚ್ಚಿಸಬೇಕು. ಕೊಪ್ಪಳ ನಗರದಲ್ಲಿ ಇನ್ನೊಂದು ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಬೇಕು. ವಸತಿ ನಿಲಯ ಬೇಕೆಂದು ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಮೆರಿಟ್ ಆಧರಿಸದೆ ಆಯ್ಕೆಮಾಡಿಕೊಳ್ಳಬೇಕು. ನರ್ಸಿಂಗ್ ಹಾಗೂ ನರ್ಸಿಂಗ್ ಸಂಬಂಧಿತ ವಿವಿಧ ಕೋರ್ಸಿನ ಸರ್ಕಾರಿ ಹಾಗೂ ಮ್ಯಾನೆಜಮೆಂಟ್ ಕೋಟಾದಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ನೀಡಬೇಕು. ಎಲ್ಲಾ ವಸತಿ ನಿಲಯಗಳಲ್ಲಿ ಪ್ರತಿ ವಾರಕ್ಕೆ ಎರಡು ದಿನ ಸ್ಪರ್ಧಾತ್ಮಕ ತರಬೇತಿ ತರಗತಿಗಳನ್ನು ಏರ್ಪಡಿಸಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಿಮ್ನಾಸ್ಟಿಕ್ ವ್ಯವಸ್ಥೆ ಮಾಡಬೇಕು ಎಂದು ವಿವಿಧ ಹಕ್ಕೊತ್ತಾಯ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಯಮುನೂರು ಇಳಗನೂರು, ದುರ್ಗೇಶ ಬರಗೂರ, ಯಮುನಾ ಚೇಳೂರ, ಉಮ್ಮೇಶ ಬಡಿಗ, ಹನುಮೇಶ ನಿರ್ವಾಟಿ, ಶಿವಪ್ಪ, ನಿರುಪಾದಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

Download Eedina App Android / iOS

X