ಮೇಘಾಲಯ ಸರ್ಕಾರದ ಸಚಿವ ಸಂಪುಟ ಪುನಾರಚನೆಗೂ ಮುನ್ನವೇ ಎಂಟು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ರಾಜಭವನದಲ್ಲಿ ರಾಜ್ಯಪಾಲ ಸಿಎಚ್ ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಸಚಿವರಾದ ಎನ್‌ಪಿಪಿಯ ಅಂಪಾರೀನ್ ಲಿಂಗ್ಲೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ. ಸಂಸ್ಮಾ, ಅಬು ತಾರ್ಹ ಮೊಂಡಲ್, ಯುಡಿಪಿಯ ಪಾಲ್ ಲಿಂಗೋ ಮತ್ತು ಕಿರ್ಮನ್ ಶಿಲ್ಲಾ, ಎಚ್‌ಎಸ್‌ಪಿಡಿಪಿಯ ಶಕ್ತಿಯಾರ್ ವಾರ್ಜಿ ಮತ್ತು ಬಿಜೆಪಿಯ ಎ.ಎಲ್. ಹೆಕ್ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಎನ್‌ಪಿಪಿ ಶಾಸಕರಾದ ವೈಲಾತ್ಮಿಕಿ ಶಿಲ್ಲಾ, ಸೊಸ್ತೇನೆಸ್ ಸೊತ್ತುನ್, ಬ್ರೆನಿಂಗ್ ಎ. ಸಂಸ್ಮಾ ಮತ್ತು ತಿಮೋತಿ ಡಿ. ಶಿರಾ ಅವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಯುಡಿಪಿ ಮುಖ್ಯಸ್ಥ ಮೆಟ್ಬಾ ಲಿಂಗೋ ಮತ್ತು ಮಾಜಿ ಸಚಿವ ಲಕ್ಷ್ಮಿನ್ ರಿಂಬುಯಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದವರು ಮಂಗಳವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.