ವಾಟರ್ ಹೀಟರ್‌ನಿಂದ ವಿದ್ಯುತ್ ಸ್ಪರ್ಶಿಸಿ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಕಕ್ಕುಪ್ಪಿ ಗ್ರಾಮದ ಶಾಲಾ ಬಾಲಕಿ ಕೆ ಹೆಚ್ ಭಾಗ್ಯಶ್ರೀ (15) ಮೃತ ವಿದ್ಯಾರ್ಥಿನಿ. ಕೂಡ್ಲಿಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿ ಓದುತ್ತಿದ್ದಳು.
ಬೆಳಗ್ಗೆ ಶಾಲೆಗೆ ಹೋಗಲು ಸ್ನಾನ ಮಾಡಿ ತಯಾರಾಗಲು ಎಲೆಕ್ಟ್ರಿಕ್ ವಾಟರ್ ಹೀಟರ್ ನೀರು ಕಾಯಿಸಲು ಇಟ್ಟಿದ್ದಾರೆ. ಆದರೆ, ಅಚಾನಕ್ಕಾಗಿ ವಿದ್ಯಾತ್ ಸ್ಪರ್ಶವಾದ್ದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿಜಯನಗರ | ಸರೋಜಿನಿ ಮಹಿಷಿ ವರದಿ ಜಾರಿಗೆ ಡಿವೈಎಫ್ಐ ಆಗ್ರಹ
ಸುದ್ಧಿ ತಿಳಿದು ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಎನ್ ಟಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ಕೊಟ್ಟರು. ಅಂತ್ಯ ಕ್ರಿಯೆಗೆ ಸಹಾಯಧನ ಮಾಡಿ ತಾಯಿ-ತಂದೆಗೆ ಸಾಂತ್ವನ ಹೇಳಿದರು. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.