ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 1 ರಂದು ತಿರುವನಂತಪುರದಲ್ಲಿ ಕೆ.ಎಂ. ಬಶೀರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, “ಧಾರ್ಮಿಕ ಉದ್ದೇಶಗಳಿಗಾಗಿ ಬಳಸುವ ಧ್ವನಿವರ್ಧಕಗಳು ನಾಗರಿಕರ ಆರೋಗ್ಯ ಮತ್ತು ಶಾಂತಿಯುತ ಜೀವನದ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತವೆ. ದೇಶಾದ್ಯಂತ ಇದಕ್ಕೆಲ್ಲ ನಿಷೇಧ ಹೇರಬೇಕು ಎಂದು ನಾರಿಮನ್ ಪ್ರತಿಪಾದಿಸಿದ್ದಾರೆ.
“ಇಂದು ಪ್ರತಿಯೊಂದು ಧರ್ಮವೂ ತನ್ನ ಪ್ರತಿಭಟನೆ ವಿಚಾರಕ್ಕೆ ಬಂದರೆ ಜೋರುಧ್ವನಿಯಲ್ಲಿ ಕಿರುಚಾಡುತ್ತವೆ. ಭಗವಂತ ಗೌಣವಾಗಿದ್ದಾನೆ. ಒಬ್ಬ ವ್ಯಕ್ತಿಯು ಮಸೀದಿಯಿಂದ ಜೋರಾಗಿ ಕಿರುಚುತ್ತಾನೆ. ಇನ್ನೊಬ್ಬ ದೇವಾಲಯದ ಗಂಟೆಗಳನ್ನು ಬಡಿಯುತ್ತಾನೆ. ಇದೆಲ್ಲವೂ ನಿಲ್ಲಬೇಕು. ಇದು ಶಬ್ದ ಮಾಲಿನ್ಯವನ್ನು ಸೃಷ್ಟಿಸುತ್ತದೆ. ಜೊತೆಗೆ ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ” ಎಂದು ನಾರಿಮನ್ ಹೇಳಿರುವುದಾಗಿ ‘ಲಾ ಚಕ್ರ’ ವೆಬ್‌ಸೈಟ್ ವರದಿ ಮಾಡಿದೆ.
“ನನ್ನ ಪ್ರಕಾರ ಪ್ರತಿಯೊಂದು ರಾಜ್ಯದಲ್ಲೂ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳ ನಿಷೇಧವಾಬೇಕು. ‘ನಾವು ಭಾರತದ ಜನರು’ ಎಂಬ ಪದಗುಚ್ಛದೊಂದಿಗೆ ಪೀಠಿಕೆ ಪ್ರಾರಂಭವಾಗುತ್ತದೆ. ಭಾರತದ ಬಹುಪಾಲು ಜನರು ಅಥವಾ ಭಾರತದ ವಯಸ್ಕ ಪುರುಷ ಜನಸಂಖ್ಯೆ ಎಂದಲ್ಲ. ಅದು ನಾವು ಜನರು. ಆದ್ದರಿಂದ ನಾವೆಲ್ಲರೂ ಭಾರತದ ಜನರು. ಅದು ಎಂದಿಗೂ ಮರೆಯಬಾರದು. ಜಾತ್ಯತೀತತೆಯು ಸಂವಿಧಾನದ ಕೇಂದ್ರಬಿಂದುವಾಗಿದೆ” ಎಂದು ಹೇಳಿದ್ದಾರೆ.