ಕೂಡ್ಲಿಗಿ | ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಕೌಂಟರ್ ತೆರೆಯಲು ವಂದೇ ಮಾತರಂ ವೇದಿಕೆ ಆಗ್ರಹ

Date:

Advertisements

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗಾಗಿ ಪತ್ಯೇಕ ಕೌಂಟರ್ ತೆರೆಯುವಂತೆ ಹೋರಾಟಗಾರರು ಹಾಗೂ ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

ಶಾಸಕರ ಕಾಳಜಿ ಫಲವಾಗಿ ಇತ್ತೀಚೆಗೆ ಸ್ವಲ್ಪ ಮಾತ್ರ ಸುಧಾರಿಸಿದೆ. ಆದರೆ ‌ಇನ್ನೂ ಕೆಲವು ಗಂಭೀರ ಸಮಸ್ಯೆಗಳು ಹಾಗೆಯೇ ಜೀವಂತವಾಗಿವೆ. ಪ್ರತಿ ಗುರುವಾರದಂದು ತಜ್ಞವೈದ್ಯರಿಂದ ಗರ್ಭಿಣಿಯರ ತಪಾಸಣೆ ಜರುಗಿಸಲಾಗುತ್ತದೆ. ಹಾಗಾಗಿ ಅವರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ. ಪ್ರತಿ ಗುರುವಾರ ನಡೆಯುವ ಗರ್ಭಿಣಿಯರ ಆರೋಗ್ಯ ತಪಾಸಣೆಗಾಗಿ ಆಗಮಿಸುವ ಗರ್ಭಿಣಿಯರ ನೋಂದಣಿಗೆ ಪತ್ಯೇಕ ಕೌಂಟರ್ ತೆರೆಯಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾ ಆರೋಗ್ಯ ಇಲಾಖಾಧಿಕಾರಿಯವರನ್ನು ಒತ್ತಾಯಿಸಿದೆ.

“ಕೂಡ್ಲಿಗಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಂದ ಹಾಗೂ ತಾಲೂಕಿನ ವಿವಿಧೆಡೆಗಳಿಂದ 500-600ಕ್ಕೂ ಹೆಚ್ಚು ಗರ್ಭಿಣಿಯರು ತಪಾಸಣೆಗೆಂದು ಆಸ್ಪತ್ರೆಗೆ ಧಾವಿಸುತ್ತಿದ್ದು, ಇದೇ ಸಂದರ್ಭದಲ್ಲಿ ಇತರೆ ಸಾಮಾನ್ಯ ತಪಾಸಣೆ ಹಾಗೂ ಚಿಕಿತ್ಸೆ ಅರಸಿ ಬರುವ ಸಾರ್ವಜನಿಕರು, ಇತರೆ ರೋಗಿಗಳು ಸೇರಿ ನೋಂದಣಿ ಕೇಂದ್ರದದ ಮುಂಭಾಗದಲ್ಲಿ ದೊಡ್ಧದಾದ ಸಾಲುಗಳು ನಿರ್ಮಾಣವಾಗುತ್ತವೆ. ಇಂತಹ ವೇಳೆ ಕಿರಿದಾದ ದಾರಿ ಮಧ್ಯದಲ್ಲಿಯೇ ಗರ್ಭಿಣಿಯರು ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಲ್ಲುವ ದುಃಸ್ಥಿತಿ ಉಂಟಾಗಿದೆ” ಎಂದು ಪ್ರಜ್ಞಾವಂತ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

“ಜನದಟ್ಟಣೆ ಹೆಚ್ಚಾದಾಗ ಗರ್ಭಿಣಿಯರು ಒಂದೆರೆಡು ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಅದರಲ್ಲೂ ಸರ್ವರ್ ತೊಂದರೆ ಇತ್ಯಾದಿ ವ್ಯತ್ಯಯಗಳ ಸಂದರ್ಭದಲ್ಲಿ ಅನಿವಾರ್ಯವಾಗಿ ಗರ್ಭಿಣಿಯರು ನಿತ್ರಾಣರಾಗಿ ಕಾಯುವಂತಾಗಿದೆ. ಸಾಮಾನ್ಯರೇ ಹೆಚ್ಚು ಸಮಯ ನಿಲ್ಲಲಾಗದಂತಹ ಸಂದರ್ಭದಲ್ಲಿ ಗರ್ಭಿಣಿಯರು ಹೆಚ್ಚು ಹೊತ್ತು ಸರತಿಯಲ್ಲಿ ನಿಲ್ಲಲು ಹೈರಾಣಾಗುವಂತಾಗಿದೆ. ನೋಂದಣಿ ಮಾಡಿರುವ ದಾರಿಯಲ್ಲಿ ಹಾದು ಹೋಗುವ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಅಕಸ್ಮಿಕವಾಗಿ ಜೋರಾಗಿ ತಾಗಿ ಪರಸ್ಪರ ವಾಗ್ವಾದ, ಜಗಳಗಳೂ ಉಂಟಾಗಿವೆ. ಗರ್ಭಿಣಿಯರು ಹಾಗೂ ಸಾರ್ವಜನಿಕರೊಂದಿಗೆ ವಾಗ್ವಾದ ನಡೆಯುವುದು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ವೇ ಸಾಮಾನ್ಯವಾಗಿದೆ” ಎಂದು ಒಂದೇ ಮಾತರಂ ಜಾಗೃತಿ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಟೋ ಚಾಲಕರ ಆಗ್ರಹ

“ಗರ್ಭಿಣಿಯರಿಗಾಗಿ ಪ್ರತಿ ಗುರುವಾರದಂದು ಪ್ರತ್ಯೇಕ ಹೆಚ್ಚುವರಿ ತಾತ್ಕಾಲಿಕ ಕೌಂಟರ್ ತೆರೆಯಬೇಕು. ಗರ್ಭಿಣಿಯರು ವಿಶ್ರಮಿಸಲು ಹಾಗೂ ತಂಗಲು ಸಾಕಷ್ಟು ಆಸನಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಸಬೇಕಿದೆ. ಕೆಲ ತಪಾಸಣೆಗಾಗಿ ಮೇಲ್ಮಹಡಿಗೆ ತೆರಳುವ ಸನ್ನಿವೇಶವಿದೆ. ಇದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಶೀಘ್ರವೇ ಜರುಗಿಸಬೇಕು” ಎಂದು ಒಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X