ಇಂದು ಚಿಂತಾಮಣಿ ನಗರದ ಎಂ ಸಿ ಆಂಜನೇಯ ರೆಡ್ಡಿ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸೆ.4ರಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದು,ಈ ಬಗ್ಗೆ ಸರ್ಕಾರದ ಕಾರ್ಯಾದೇಶ ಹೊರಡಿಸಿ ಸುಮಾರು 1,12,467 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಲು ಕ್ರಮವಹಿಸಬೇಕು. ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆನ್‌ಲೈನ್ ಕಾರ್ಯಗಳು ಮಾಡಲು ಸಮಸ್ಯೆಯಾಗುತ್ತಿದ್ದು, ಕ್ಲಸ್ಟರ್ ಹಂತದಲ್ಲಿ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸಿ ಆನ್‌ಲೈನ್ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಬೇಕು. ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಕೆಲವು ಜಿಲ್ಲೆಗಳಲ್ಲಿ ಮೊಟ್ಟೆ ಖರೀದಿ ಮತ್ತು ಸರಬರಾಜು ಮಾಡುವುದಕ್ಕೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದರಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮುಖ್ಯ ಶಿಕ್ಷಕರಿಗೆ ಕಷ್ಟಕರವಾಗಿದ್ದು, ಏಜೆನ್ಸಿ ಮುಖಾಂತರ ಶಾಲೆಗಳಿಗೆ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ನೀಡುವಂತೆ ಜಿಲ್ಲಾಡಳಿತದ ಕಡೆಯಿಂದ ವ್ಯವಸ್ಥೆ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಚಿಂತಾಮಣಿ | ವಿಶೇಷ ಪ್ಯಾಕೇಜ್‌ಗಾಗಿ ಯರಕೋಟೆ ಗ್ರಾಮದಿಂದ ಬೆಂಗಳೂರಿಗೆ ಪಾದಯಾತ್ರೆ
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಅಶೋಕ್ ಕುಮಾರ್, ಜಿಲ್ಲಾಧ್ಯಕ್ಷ ಎ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಸುನಿಲ್, ಆಂಜನೇಯಪ್ಪ, ಜಗದೀಶ್, ವಸಂತ್ ರೆಡ್ಡಿ, ಆರ್ ಮಂಜುನಾಥ್, ಪ್ರಕಾಶ್ ರೆಡ್ಡಿ, ಗಂಗುಲಪ್ಪ, ವೆಂಕಟಾಚಲಪತಿ, ವಿ ರಮೇಶ್, ಮಾಸ್ತನ್ ವಲಿ, ಬಿ ಆಂಜನೇಯ ರೆಡ್ಡಿ, ಮಂಜುನಾಥ್, ಶಂಕರ್ ರೆಡ್ಡಿ, ಕೆಎಂ ಶಿವಪ್ರಸಾದ್, ಎಸ್ ವೆಂಕಟರತ್ನಮ್ ಹಾಗೂ ಇತರರು ಇದ್ದರು.