ಗದಗ | ಸರಕಾರಿ ರಸ್ತೆ ಅತೀಕ್ರಮಣ, ಕ್ರಮ ಕೈಗೊಳ್ಳಲು ಆಗ್ರಹ: ದೀಪಿಕ್ ಪಾಟೀಲ್

Date:

Advertisements

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಪೇಠಬಣ ಗ್ರಾಮದಲ್ಲಿ ಸರ್ವೆ 11 ರಲ್ಲಿ ದಾಖಲಾಗಿರುವ ಸರ್ಕಾರಿ ರಸ್ತೆಯನ್ನು ಅತೀಕ್ರಮಣ ಮಾಡಿದ್ದು ಹಕ್ಕುಸ್ಥಾಪನೆಯ ಕುರಿತಂತೆ ಕೆಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಸಮಾಜ ಸೇವಕ ದೀಪಕ ಪಾಟೀಲ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಜಮೀನನ್ನು ಸ್ಥಳೀಯರಾದ ರೇವಣ್ಣಸಿದ್ದ ಕಲ್ಮಠ ಮತ್ತು ಸೋಮಶೇಖರಯ್ಯ ಕಲ್ಮಠ ಸಹೋದರರು ತಮ್ಮದೇ ಆದ ಖಾಸಗಿ ಜಮೀನಂತೆ ಬಳಕೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಲ್ಲಿ ಆತಂಕವಿದೆ.

ಅಧಿಕೃತ ದಾಖಲೆಗಳ ಪ್ರಕಾರ ಈ ಜಮೀನು ಸರ್ಕಾರದ ಹೆಸರಿನಲ್ಲಿ ಉಳಿದಿದ್ದು, ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಬೇಲಿ ಹಾಕಿ ಕೃಷಿ ಚಟುವಟಿಕೆಗಳು ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.

“ಈ ಸಂಬಂಧ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದು, ಪರಿಶೀಲನೆ ನಡೆಸಿ ನಿಖರತೆ ಸ್ಥಾಪಿಸಬೇಕೆಂದು ನಿರೀಕ್ಷಿಸುತ್ತಿದ್ದಾರೆ.

ಸ್ಥಳೀಯರು ಗಂಭೀರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಕ್ಕೆ ಸೇರಿದ ಭೂಮಿಯನ್ನು ತಮ್ಮದೇ ಎನ್ನಿಸಿಕೊಂಡು ಬಳಸುತ್ತಿರುವ ಈ ಸಹೋದರರು, ಯಾವುದೇ ಕಾನೂನು ದಾಖಲೆಗಳಿಲ್ಲದೆ ಸರಳವಾಗಿ ಅಕ್ರಮ ಕಬಳಿಕೆಗೆ ಮುಂದಾಗಿದ್ದಾರೆ” ಎಂದು ಆರೋಪಿಸಿದರು.

ಇದು ಕೇವಲ ವ್ಯವಸ್ಥೆಯ ದುರ್ಬಲತೆಗೆ ನಿದರ್ಶನವಲ್ಲ, ಶ್ರೇಯಸ್ಕರ ಗ್ರಾಮೀಣ ಅಭಿವೃದ್ಧಿಗೆ ತೀವ್ರವಾದ ಹಿನ್ನಡೆಯಾಗಿದೆ. ನಾವು ಈ ಭೂಮಿಯ ಉಳಿವಿಗಾಗಿ ಆಕ್ರಮಣಕಾರರ ವಿರುದ್ಧ ತಕ್ಷಣ ಕಾನೂನು ಕ್ರಮವನ್ನು ನಿರೀಕ್ಷಿಸುತ್ತೇವೆ” ಎಂದು ಹೇಳಿದರೆ.

ಸರ್ಕಾರಿ ಸಂಪತ್ತಿನ ಬಳಕೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಠೆಯು ಅತ್ಯಂತ ಅವಶ್ಯಕ. ಈ ಪ್ರಕಾರ, ಗದಗ ಜಿಲ್ಲೆಯ, ಲಕ್ಷ್ಮೇಶ್ವರದ, ಪೇಠಬಣ ಗ್ರಾಮದ ಈ ಘಟನೆಯು ಗ್ರಾಮೀಣ ಆಡಳಿತದ ಪ್ರತಿಬಿಂಬವಾಗಿದ್ದು, ಸಂಬಂಧಪಟ್ಟವರು ನೀತಿಯುತ, ಸಮಾನತೆಯ ದೃಷ್ಟಿಕೋಣದಿಂದ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗಿದೆ” ಎಂದು ದೀಪಕ್ ಪಾಟೀಲ್ ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X