ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹೊಸೂರು ಗುಡ್ಡೆಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುಬಾಬು ಅವರು Specificed post ಕೌನ್ಸಲಿಂಗ್ ನಲ್ಲಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಯಾಗಿ (BRC) ಯಾಗಿ ವರ್ಗಾವಣೆಯಾಗಿದ್ದಾರೆ.
ತೀರ್ಥಹಳ್ಳಿಯಲ್ಲಿ ಸರಿ ಸುಮಾರು 13 ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ, ಶ್ರದ್ದೆಯಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿ, ತಮ್ಮ ಕರ್ತವ್ಯದ ಸಮಯದಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಇವರು ಎಷ್ಟೋ ವಿದ್ಯಾರ್ಥಿಗಳಿಗೆ ಜೀವನದ ಪಾಠ ಹೇಳಿ ಕೊಟ್ಟವರು. ನಗು ಮೊಗದಿಂದ ತನ್ನವರನ್ನ ಬೆಳೆಸಿ ತಾನು ಬೆಳೆದ ನಿಸ್ವಾರ್ಥ ವ್ಯಕ್ತಿ ಎಂದರೂ ತಪ್ಪಾಗುವುದಿಲ್ಲ.
ವಿದ್ಯಾಭ್ಯಾಸ ಎಂಬುದಷ್ಟೇ ಅಲ್ಲದೆ ಕ್ರೀಡಾ ವಿಭಾಗದಲ್ಲೂ ಹೊಸೂರು ಗುಡ್ಡೆಕೇರಿ ಪ್ರೌಢ ಶಾಲೆಯನ್ನು ನಂಬರ್ 1 ಪ್ರಶಸ್ತಿ ಪಡೆಯುವಂತೆ ಮಾಡಲು ಇವರು ಸ್ಫೂರ್ತಿ ಎಂದರೆ ತಪ್ಪಾಗಲಾರದು.
ನಮ್ಮ ಈದಿನ ಡಾಟ್ ಕಾಮ್ ಮಾಧ್ಯಮದಿಂದ ಸಹ ಶಾಲೆಯ ಕುರಿತು ಈ ಶೀರ್ಷಿಕೆಯಡಿಯಲ್ಲಿ
“ಹೀಗೊಂದು ಸರ್ಕಾರಿ ಶಾಲೆಯ ಯಶೋಗಾಥೆ ಖಾಸಗಿ ಶಾಲೆಗಳ ಬೆನ್ನು ಬಿದ್ದವರು ಓದಲೇಬೇಕು!
https://eedina.com/karnataka/this-is-a-success-story-of-a-government-school-a-must-read-for-those-who-have-given-up-on-private-schools/2025-06-19/
ದಶಕದಿಂದಲೂ ಈ ಶಾಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲೂ ಗಮನಾರ್ಹ ಸಾಧನೆಗಳನ್ನು ಮಾಡಿ ಹೆಮ್ಮೆಯ ಕೇಂದ್ರವಾಗಿ ಹೊರಹೊಮ್ಮಿದೆ. ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ನಿರಂತರವಾಗಿ ಭಾಗವಹಿಸುವ ಮೂಲಕ ಅಸಾಧಾರಣ ಯಶಸ್ಸುಗಳಿಸಿದೆ ಎಂದು ಸುದ್ದಿ ಮಾಡಿದ್ದೇವು.
ಈಗ ಓದುವ ವಿದ್ಯಾರ್ಥಿಗಳಲ್ಲದೇ ಎಷ್ಟೋ ಮಂದಿಗೆ ಸ್ಫೂರ್ತಿದಾಯಕರಾಗಿದ್ದ ಮಂಜು ಬಾಬು ಅವರ ಈ ವರ್ಗಾವಣೆ ಅವರ ಆಪ್ತ ಬಳಗ ಹಾಗೂ ಸ್ನೇಹಿತರಿಗೆ ಹಾಗೂ ಸಹುದ್ಯೋಗಿಗಳಿಗೆ ಬೇಸರ ತಂದಿರುವುದು ಸತ್ಯ.
ನಿಮ್ಮಂತಹ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಗೆ ಬೇಕಿದೆ ಎಂದಷ್ಟೇ ಹೇಳಬಹುದು.
ಈಗಾಗಲೇ ಚಳ್ಳಕೆರೆಗೆ ವರ್ಗಾವಣೆ ಆಗಿರುವ ನಿಮಗೆ ಶುಭವಾಗಲಿ.